ETV Bharat / state

ಪ್ರತಾಪಗೌಡ ಪಾಟೀಲ್ ಮಾರಾಟವಾಗಿ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ : ಸಿದ್ದರಾಮಯ್ಯ

author img

By

Published : Apr 5, 2021, 3:22 PM IST

ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ ನಾಯಕರು ಸಿಂಧನೂರಿನ ಉಮಲೂಟಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.

Former CM Siddaramaiah election Campaign at Maki
ಮಸ್ಕಿಯಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ

ರಾಯಚೂರು : ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯವರು 50 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಮಾತನಾಡಿದ ಅವರು, ಚುನಾವಣೆಗೆ ವ್ಯಯಿಸುತ್ತಿರುವ ಇಷ್ಟೊಂದು ಹಣ ಯಾರದ್ದು? ಇದು ಲೂಟಿ ಹೊಡೆದಿರುವ ಹಣವಾಗಿದೆ. ಹಾಗಾಗಿ, ನೀವು ಬಸನಗೌಡ ತುರುವಿಹಾಳ ಅವರಿಗೆ ಆಶೀರ್ವಾದ ಮಾಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಓದಿ : ನಾಳೆ ಬೆಳಗಾವಿಗೆ ಸಿಎಂ: ಉಪಚುನಾವಣಾ ಪ್ರಚಾರ ಕಣಕ್ಕೆ ಎಂಟ್ರಿ

ಹಿಂದೆ ನೀವೆಲ್ಲ ವೋಟ್​ ಹಾಕಿ ಪ್ರತಾಪಗೌಡರನ್ನು ಗೆಲ್ಲಿಸಿದ್ರಿ. ಆದರೆ, ಅವರೇ ಮಾರಾಟ ಆಗಿ ಜನರಿಗೆ ಅವಮಾನ ಮಾಡಿದ್ದಾರೆ. ಈ ಬಾರಿ ಪ್ರತಾಪಗೌಡಗೆ ತಕ್ಕ ಪಾಠ ಕಲಿಸಬೇಕು. ಬಸನಗೌಡ ಬಹಳ ಕಡಿಮೆ ಅಂತರದಿಂದ ಸೋತಿದ್ದರು. ಅವರು ಬಹಳ ಒಳ್ಳೆಯ ವ್ಯಕ್ತಿ, ಹಾಗಾಗಿ ಅವರಿಗೆ ಟಿಕೆಟ್ ಕೊಡಬೇಕೆಂದು ಜನರು ಆಪೇಕ್ಷೆ ಪಟ್ಟಿದ್ದರು. ಅದಕ್ಕೆ ಟಿಕೆಟ್ ಕೊಡಲಾಗಿದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ. ದೇಶಕ್ಕಾಗಿ ಪ್ರಾಣ ಕೊಟ್ಟ ಪಕ್ಷ ಕಾಂಗ್ರೆಸ್, ಬಿಜೆಪಿಯವರು ಎಂದಾದರೂ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರಾ?. 7 ಕೆ ಜಿ ಅಕ್ಕಿ ಕೊಟ್ಟವರು, ಇಂದಿರಾ ಕ್ಯಾಂಟೀನ್ ಭಾಗ್ಯ ತಂದವರು, ಪಶು ಭಾಗ್ಯ ಕೊಟ್ಟಿದ್ದು ಕಾಂಗ್ರೆಸ್​ ಸರ್ಕಾರ ಎಂದು ಮತದಾರರ ವೋಲೈಕೆ ಕಸರತ್ತನ್ನು ಸಿದ್ದರಾಮಯ್ಯ ನಡೆಸಿದರು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಪ್ರತಾಪಗೌಡ ಪಾಟೀಲ್​- ಬಿಜೆಪಿಯಿಂದ ಬಸನಗೌಡ ತುರವಿಹಾಳ ಸ್ಪರ್ಧಿಸಿದ್ದರು. ಆಗ ಪ್ರತಾಪಗೌಡ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿ ಮಸ್ಕಿ ಕ್ಷೇತ್ರದ ಶಾಸಕರಾಗಿದ್ದರು. ಬಳಿಕ ಅವರು ಆಪರೇಷನ್​ ಕಮಲದ ಮೂಲಕ ಬಿಜೆಪಿ ಸೇರಿದ್ರು. ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದ ತುರವಿಹಾಳ ಬದಲಾದ ರಾಜಕೀಯ ಸಂದರ್ಭದಲ್ಲಿ ಕಾಂಗ್ರೆಸ್​ ಸೇರಿ, ಪ್ರತಾಪಗೌಡ ವಿರುದ್ಧ ತೊಡೆ ತಟ್ಟಿದ್ದಾರೆ. ಕ್ಷೇತ್ರದ ಜನ ಈ ಬಾರಿ ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.