ರಾಯಚೂರು: ಜಿಲ್ಲೆಯ ಹೊರವಲಯದ ಏಗನೂರು ಗ್ರಾಮದ ಕೆರೆಗೆ ವಿದೇಶಿ ಹಕ್ಕಿಗಳ ಗುಂಪು ಬಂದಿದೆ. ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆ ಆಗಮಿಸುವ ಹಕ್ಕಿಗಳು, ಮಳೆಗಾಲ ಮತ್ತು ಚಳಿಗಾಲದಲ್ಲಿ ಇಲ್ಲೇ ಇದ್ದು ತಮ್ಮ ಸಂತಾನ ಕ್ರಿಯೆ ಬಳಿಕ ವಿದೇಶಕ್ಕೆ ಹಾರುತ್ತವೆ.
ಟಿಬೇಟ್, ಉತ್ತರ ಚೀನಾ, ಮಂಗೋಲಿಯಾ ಸೇರಿ ಹಲವು ದೇಶಗಳಿಂದ ಬರುವ ಪಕ್ಷಿಗಳು ಇಲ್ಲಿನ ನಿಸರ್ಗ ಸೌಂದರ್ಯವನ್ನು ಹೆಚ್ಚಿಸುತ್ತವೆ. ತಂಪು ವಾತಾವರಣದಲ್ಲಿ ನೋಡುಗರ ಕಣ್ಣಿಗೆ ಇನ್ನಷ್ಟು ಇಂಪು ನೀಡುತ್ತದೆ. ವಿದೇಶದಿಂದ ಬರುವ ಪಕ್ಷಿಗಳಿಗಾಗಿ ನಿರಂತರವಾಗಿ ನೀರು ಮತ್ತು ಆಹಾರ ದೊರೆಯುವಂತೆ ಮಾಡಿ, ಪಕ್ಷಿಧಾಮ ನಿರ್ಮಿಸಬೇಕು ಎನ್ನೋದು ಪಕ್ಷಿ ಪ್ರೇಮಿಗಳ ಒತ್ತಾಸೆಯಾಗಿದೆ.