ರಾಯಚೂರು: ಉಕ್ಕಿ ಹರಿಯುತ್ತಿರುವ ಭೀಮಾ ನದಿಯ ನೀರು ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ಬಳಿಯ ಕೃಷ್ಣ ನದಿಗೆ ಸಂಗಮವಾಗುವುದರಿಂದ ತಾಲೂಕಿಗೆ ಪ್ರವಾಹ ಭೀತಿಗೆ ಎದುರಾಗಿದೆ.
ತಾಲೂಕಿನ ನಡುಗಡ್ಡೆ ಪ್ರದೇಶಗಳು ಒಳಗೊಂಡಂತೆ 17 ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್ನಿಂದ ಎಲ್ಲ ಗೇಟ್ಗಳ ಮೂಲಕ ಬೆಳಗ್ಗೆ 6 ಗಂಟೆಗೆ 3.10 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ.
ಇತ್ತ ನಾರಾಯಣಪುರ ಜಲಾಶಯದಿಂದ ಬೆಳಗ್ಗೆ 7ಕ್ಕೆ 1.23 ಲಕ್ಷ ಕ್ಯೂಸೆಕ್ ನೀರನ್ನ ನದಿಗೆ ಹರಿಸಲಾಗುತ್ತಿದೆ. ಇದರಿಂದ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ನಾರಾಯಣಪುರ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬಿಟ್ಟಿದ್ದರಿಂದ ಎರಡು ನದಿಗಳ ನೀರು ಸಂಗಮವಾಗಿ ಪ್ರವಾಹ ಭೀತಿ ಎದುರಾಗಿದೆ. ನದಿ ತೀರದಲ್ಲಿ ಗದ್ದೆಗಳಿಗೆ ನೀರು ನುಗ್ಗಿ ರೈತರ ಬೆಳೆ ನಷ್ಟ ಸಂಭವಿಸಿದ್ದು, ರೈತರನ್ನ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.
ಪ್ರವಾಹದ ಹಿನ್ನೆಲೆಯಲ್ಲಿ ನದಿ ತೀರಕ್ಕೆ ಯಾರೂ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿ, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿ ಹೇಳಲಾಗಿದೆ ಜತೆಗೆ ಪ್ರವಾಹ ಎದುರಿಸಲು ಅಗತ್ಯ ಕೈಗೊಂಡಿದ್ದು, ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.