ETV Bharat / state

ಮೀನು ಹಿಡಿಯಲು ಹೋದ ಯುವಕ ಹೆಣವಾಗಿ ಪತ್ತೆ: ಕೊಲೆ ಸಂಶಯ - deadbody found in bogapura river

ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕನ ಹೆಣ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಭೋಗಾಪುರ ಕೆರೆಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಯಾರೋ ಕೊಲೆ ಮಾಡಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.

deadbody
deadbody
author img

By

Published : Jun 7, 2021, 10:27 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಭೋಗಾಪುರ ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕ ಹೆಣವಾಗಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

ಭಾನುವಾರ ಸಂಜೆ ಭೋಗಾಪುರ ಕೆರೆಗೆ ಮೀನು ಹಿಡಿಯಲು ಹೋಗಿದ್ದ ಭೋಗಾಪುರ ತಾಂಡಾದ ಭೀಮಪ್ಪ ಪವಾರ (35) ದಿನ ಕಳೆದರೂ ವಾಪಸ್​ ಬಾರದೆ ಹೋದ ಹಿನ್ನೆಲೆ ಮೊಸಳೆ ಒಯ್ದಿರಬಹುದು ಎಂದು ಊಹಿಸಲಾಗಿತ್ತು. ನಿರಂತರ 16 ತಾಸುಗಳ ಕಾಲ ಸ್ಥಳೀಯ ಈಜುಗಾರರು ಮೃತದೇಹ ಹುಡುಕಾಟ ನಡೆಸಿದ್ದು, ಸೋಮವಾರ ಮಧ್ಯಾಹ್ನ ಕೆರೆಯ ಜಬ್ಬಲದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ದೇಹದ ಮೇಲೆ ಮೊಸಳೆ ಹಿಡಿದಿರುವ ಯಾವುದೇ ಗುರುತು ಪತ್ತೆ ಆಗಿಲ್ಲ. ಯಾರೊ ಕೊಲೆ ಮಾಡಿ ಕೆರೆ ನೀರಿನ ಜಬ್ಬಲದಲ್ಲಿ ಮುಚ್ಚಿಡುವ ಯತ್ನ ನಡೆಸಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದು ತನಿಖೆಯಿಂದ ಸತ್ಯಾಂಶ ಹೊರ ಬೀಳಲಿದೆ.

ಸಿಪಿಐ ದೀಪಕ್ ಭೂಸರೆಡ್ಡಿ, ಪಿಎಸ್ಐ ಡಾಕೇಶ್​ ಯು ಸ್ಥಳಕ್ಕೆ ಭೇಟಿ ನೀಡಿದ್ದು, ವಿಚಾರಣೆ ನಡೆಸಿದ್ದಾರೆ. ಮುದಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.