ETV Bharat / state

ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ.. ಆತಂಕಕ್ಕೆ ಸಿಲುಕಿದ ಕಾರ್ಮಿಕರು.. - ಹಟ್ಟಿ ಚಿನ್ನದ ಗಣಿ ಸುದ್ದಿ 2021

ಆರಂಭದಲ್ಲಿ ಕಂಪನಿ ಕಾರ್ಮಿಕರು ಬಕೆಟ್, ಕೊಡ ಹಿಡಿದು ಬೆಂಕಿ ನಂದಿಸಲು ಪರದಾಡಿದರು. ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳ (Firebrigade) ಸಿಬ್ಬಂದಿ ಬೆಂಕಿ ಕೆನ್ನಾಲಿಗೆ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು..

fire-accident-in-hatti-gold-mines
ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ
author img

By

Published : Nov 14, 2021, 7:36 PM IST

ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ (Hatti gold mines)ಯಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡಿತ್ತು. ಪರಿಣಾಮ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು.

ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ

ಕಂಪನಿ ವಿಜಯ ಶಾಫ್ಟ್​ನಲ್ಲಿ ಹಳೆಯ ಟೈರ್​, ಟ್ಯೂಬ್, ಸುಟ್ಟ ಆಯಿಲ್ ಸೇರಿದಂತೆ ತ್ಯಾಜ್ಯ ವಸ್ತುಗಳಿಗೆ ಬೆಂಕಿ ತಗುಲಿದ್ದರಿಂದ ಈ ಅವಘಡ ಜರುಗಿದೆ ಎನ್ನಲಾಗಿದೆ. ಅಣತಿ ದೂರದಲ್ಲಿಯೇ ಮದ್ದಿನ ಮನೆ (blasting materials room) ಇದ್ದುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಹೆಚ್ಚಿಸಿತ್ತು.

ಆರಂಭದಲ್ಲಿ ಕಂಪನಿ ಕಾರ್ಮಿಕರು ಬಕೆಟ್, ಕೊಡ ಹಿಡಿದು ಬೆಂಕಿ ನಂದಿಸಲು ಪರದಾಡಿದರು. ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಕೆನ್ನಾಲಿಗೆ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಅವಘಡದಿಂದ ಆಗಿರುವ ನಷ್ಟದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ಕಂಪನಿಯ ಅಧಿಕಾರಿಗಳು ನೀಡಿಲ್ಲ.

ಓದಿ: ದೇವಸ್ಥಾನದ ಆವರಣದಲ್ಲೇ ಮಕ್ಕಳು ಭಿಕ್ಷೆ ಬೇಡುತ್ತಿದ್ದರು ಸುಮ್ಮನೇ ಏಕೆ ಇದ್ದೀರಿ : ರಾಯಬಾಗದಲ್ಲಿ ಪೊಲೀಸರನ್ನ ತರಾಟೆಗೆ ನ್ಯಾಯಾಧೀಶರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.