ರಾಯಚೂರು : ಮಗಳ ವಿವಾಹದಲ್ಲಿ ತಂದೆ ಸಾಮಾನ್ಯವಾಗಿ ವರನ ಕಡೆಯವರಿಗೆ ವಧುವನ್ನು ಧಾರೆಎರೆದು ಕೊಡುತ್ತಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ತಂದೆಯೇ ತನ್ನ ಮಗಳ ವಿವಾಹದ ಪೌರೋಹಿತ್ಯ ವಹಿಸಿದ್ದ ವಿಶಿಷ್ಟ ಪ್ರಸಂಗ ನಡೆದಿದೆ.
ಲಾಕ್ಡೌನ್ ಘೋಷಣೆಯಾಗಿರುವುದರಿಂದ ಪುರೋಹಿತರು ಸಿಗದ ಹಿನ್ನೆಲೆ ತಂದೆಯೇ ಮಗಳ ವಿವಾಹದ ಪೌರೋಹಿತ್ಯ ವಹಿಸಿದ್ದರು.
ಜಿಲ್ಲೆಯ ಸಿಂಧನೂರು ತಾಲೂಕಿನ ಪೋತ್ನಾಳ ಗ್ರಾಮದ ಮಲ್ಲಯ್ಯ ಸ್ವಾಮಿ ಎಂಬುವರು ತನ್ನ ಮಗಳ ವಿವಾಹಕ್ಕೆ ಪೌರೋಹಿತ್ಯ ವಹಿಸಿದ್ದರು.