ರಾಯಚೂರು: ಹೆತ್ತ ಮಗಳನ್ನೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಜಂತಿ ಗ್ರಾಮದಲ್ಲಿ ನಡೆದಿದೆ.
ಮಾನಮ್ಮ (14) ತಂದೆಯಿಂದ ಹತ್ಯೆಯಾದ ಮಗಳು. ತಿಮ್ಮಯ್ಯ ಹೆತ್ತ ಮಗಳನ್ನೇ ಹತ್ಯೆಗೈದ ಪಾಪಿ ತಂದೆ. ಮಾನಮ್ಮ ಎಂದಿನಂತೆ ಬೆಳಗ್ಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಳು. ಈ ವೇಳೆ ಹಿಂದಿನಿಂದ ಬಂದ ತಿಮ್ಮಯ್ಯ, ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕೊಲೆಗೆ ನಿಖರ ತಿಳಿದು ಬಂದಿಲ್ಲ. ಸ್ಥಳಕ್ಕಾಗಮಿಸಿದ ಹಟ್ಟಿ ಪೊಲೀಸರು ಪರಿಶೀಲಿಸಿ, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.