ಸಿರವಾರ (ರಾಯಚೂರು): ತುಂಗಭದ್ರಾ ಎಡದಂಡೆ ಕೆಳಭಾಗದ ನಾಲೆಗಳಿಗೆ ಸಮರ್ಪಕ ನೀರು ಒದಗಿಸುವಂತೆ ಆಗ್ರಹಿಸಿ, ರೈತರು ಸಿರವಾರ ಪಟ್ಟಣ ಬಂದ್ ಮಾಡಿ ಪ್ರತಿಭಟಿಸಿದರು.
ಸಿರವಾರ ತಾಲೂಕಿನ ಕೆಳಭಾಗದ ಟಿಎಲ್‌ಬಿಸಿಯ 104 ಮೈಲ್‌ಗೆ ಕಾಡಾ ಮೀಟಿಂಗ್ ನಿಗದಿತ ಪ್ರಮಾಣದಂತೆ ನೀರು ಹರಿಸಬೇಕು. ಆದರೆ, ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಕೆಳಭಾಗದ ರೈತರ ಹೊಲಗಳಿಗೆ ನೀರು ಸಿಗದೇ ವ್ಯವಸಾಯ ಸಾಕಷ್ಟು ತೊಂದರೆಯಾಗಿದೆ. ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ, ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪಿಸಿದರು.
ಓದಿ: ಕೊರೊನಾ ಬಿಕ್ಕಟ್ಟಿನ ಬಳಿಕ ದಾಖಲೆ ಬರೆಯಿತು ಅಂಜನಾದ್ರಿ ಬೆಟ್ಟದ ಆಂಜನೇಯನ ಆದಾಯ!
ಲಿಂಗಸೂಗೂರು-ರಾಯಚೂರು ರಸ್ತೆಯನ್ನ ಬಂದ್ ಮಾಡಿ ಪ್ರತಿಭಟಿಸುತ್ತಿದ್ದ ವೇಳೆ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು.