ರಾಯಚೂರು: ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಹತ್ತಿ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿದೆ.
ಹತ್ತಿ ಕಾಯಿಗಳು ಗಿಡದಲ್ಲೇ ಬಾಡುತ್ತಿರುವ ಹಿನ್ನೆಲೆ ಹಾಕಿದ ಬಂಡವಾಳ ಕೂಡ ಬರುವುದಿಲ್ಲ ಎಂಬುದನ್ನು ಅರಿತ ಬೆಳೆಗಾರ ಹತ್ತಿ ಬೆಳೆ ನಾಶಕ್ಕೆ ಮುಂದಾಗಿದ್ದಾನೆ. ರಾಯಚೂರು ತಾಲೂಕಿನ ಮಸ್ಸಲಾಪೂರ ಗ್ರಾಮದ ರೈತ ತನ್ನ15 ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ರು. ಬೆಳೆ ಕೂಡ ಸಮೃದ್ಧವಾಗಿ ಬೆಳೆದಿದ್ದು, ಗಿಡದಲ್ಲಿ ಹೆಚ್ಚು ಕಾಯಿ ಕಟ್ಟಿದ್ದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಸುಮಾರು 10 ಲಕ್ಷ ಲಾಭ ನಿರೀಕ್ಷೆಯಲ್ಲಿದ್ದ ರೈತನಿಗೆ ಅತಿವೃಷ್ಟಿಯಿಂದಾಗಿ ಹಾಕಿದ ಬಂಡವಾಳವು ಬರುವುದು ಅನುಮಾನವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹತ್ತಿ ಬೆಳೆಗಾರ, ಹದಿನೈದು ಎಕರೆಯಲ್ಲಿ ಹತ್ತಿ ಬೆಳೆಯಲು ಈಗಾಗಲೇ 2 ಲಕ್ಷ ರೂ ವೆಚ್ಚ ಮಾಡಲಾಗಿದೆ. ಸಂಪೂರ್ಣ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿರುವುದರಿಂದ ಮುಂದಿನ ನಿರ್ವಹಣೆ ಆರ್ಥಿಕ ನಮಗೆ ಹೊರೆಯಾಗಲಿದೆ. ಬೆಳೆ ಹಾಳಾಗಿರುವ ಕಾರಣ ಇನ್ನೂ ಇದರಿಂದ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ, ಹೀಗಾಗಿ ಹಿಂಗಾರು ಬೆಳೆ ಬೆಳೆಯಲು ಹತ್ತಿ ಬೆಳೆ ನಾಶ ಮಾಡಲಾಗುತ್ತಿದೆ ಎಂದು ತಿಳಿಸಿದ್ರು.