ರಾಯಚೂರು: ಜಿಲ್ಲೆಯ ಲಿಂಗಸುಗೂರು ಮೀಸಲಾತಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗಳಿಗೆ ಸರ್ಕಾರಿ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ನೀಡುವಲ್ಲಿ ಶೋಷಣೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೃಷ್ಣಾ ಪ್ರವಾಹದ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಸಂತ್ರಸ್ತರ ಶಾಶ್ವತ ಸ್ಥಳಾಂತರಕ್ಕೆ ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದನೆ ಸಿಗುತ್ತಿಲ್ಲ. ಪರಿಶಿಷ್ಟರಾಗಿ ಜನಿಸಿದ್ದೇ ತಪ್ಪಾಗಿದೆ. ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಬೆಳಗ್ಗೆಯಿಂದ ಕಚೇರಿ ಆವರಣದಲ್ಲಿ ಧರಣಿ ಕುಳಿತಿದ್ದರೂ ರಾತ್ರಿ ಬಂದು ಭೇಟಿ ಮಾಡುವ ಔಚಿತ್ಯವೇನು? ಪ್ರವಾಹ ಸಂತ್ರಸ್ತರ ಜೊತೆ ಡ್ರಾಮಾ ನಡೆಸುತ್ತಿದ್ದೀರಿ.
15 ವರ್ಷದಲ್ಲಿ ಒಂದು ನಿವೇಶನ ಹಂಚಿಕೆ ಮಾಡದ ಆಡಳಿತ, ಪರಿಶಿಷ್ಟರಿಗೆ ಏನು ನ್ಯಾಯ ಕೊಡಿಸಲು ಸಾಧ್ಯ. ರಾತ್ರಿ ವೇಳೆ ಮಾತು ಬೇಡ. ಕಳೆದ ವರ್ಷ ಒಂದು ಜನಾಂಗದ ಮಾತು ಕೇಳಿ ನಮ್ಮವರನ್ನು ಪರಿಹಾರ ಕೇಂದ್ರದಿಂದ ಹೊರ ಹಾಕಿಸಿದ ನಿಮಗೆ ಮಾನವೀಯತೆ ಇಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲಿ ಚರ್ಚಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.