ರಾಯಚೂರು : ನಗರದ ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬದ ಪಕ್ಕವೇ ಕಿರಾಣಿ ಅಂಗಡಿ ಹಾಕಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲೀಕ ಕೊನೆಗೂ ಈಟಿವಿ ಭಾರತದ ವರದಿಯಿಂದ ಎಚ್ಚೆತ್ತಿದ್ದಾರೆ. ವಿದ್ಯುತ್ ಕಂಬದ ಜಾಗ ಬಿಟ್ಟು ತನ್ನ ಅಂಗಡಿಯನ್ನ ಬೇರೆಡೆ ಸ್ಥಳಾಂತರಿಸಿದ್ದಾರೆ.
ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬದ ಪಕ್ಕವೇ ಕಿರಾಣಿ ಅಂಗಡಿ ಸ್ಥಾಪಿಸಿ ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತ್ತಿದ್ದರು. ಈ ಕುರಿತು ಈಟಿವಿ ಭಾರತ "ರಾಯಚೂರಿನಲ್ಲಿ ಅಂಗಡಿಯೊಳಗೆ ವಿದ್ಯುತ್ ಕಂಬ" ಎಂಬ ಶೀರ್ಷಿಕೆಯಡಿ ಅಗಸ್ಟ್ 28 ರಂದು ವರದಿ ಮಾಡಿತ್ತು. ಕೊನೆಗೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರಿಗೆ ಕಂಬದ ಜಾಗ ಬಿಟ್ಟು ಡಬ್ಬಿ ಸ್ಥಳಾಂತರ ಮಾಡಲು ಸೂಚಿಸಿದ್ದಾರೆ. ಅಗಸ್ಟ್ 29ರಂದು ಅಂಗಡಿ ಸ್ಥಳಾಂತರ ಮಾಡಿದ್ದಾರೆ.
ಅಧಿಕಾರಿಗಳ ಸೂಚನೆ ಬಳಿಕ ಮಾಲೀಕ ಅಂಗಡಿ ಸ್ಥಳಾಂತರ ಮಾಡಿಕೊಂಡಿದ್ದಾರೆ. ಈ ಟಿವಿ ಭಾರತದ ಈ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಾಕ್ತವಾಗಿದೆ.