ETV Bharat / state

ಮಸ್ಕಿ: ಕ್ವಾರಂಟೈನ್​​ ಕೇಂದ್ರದಿಂದ ತಪ್ಪಿಸಿಕೊಂಡು ಮೂವರು ಪರಾರಿ!

ಕ್ವಾರಂಟೈನ್​ಗೆ ಒಳಗಾಗಿದ್ದ ಮೂವರು ಕಣ್ಮರೆಯಾಗಿದ್ದು, ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Escape from quarantine: Complaint filed against three persons
ಸಂಗ್ರಹ ಚಿತ್ರ
author img

By

Published : Jun 3, 2020, 4:46 PM IST

ರಾಯಚೂರು: ಕ್ವಾರಂಟೈನ್​​ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿರುವ ಮೂವರು ವ್ಯಕ್ತಿಗಳ ವಿರುದ್ಧ ಇಲ್ಲಿನ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಸ್ಕಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್​ ಕೇಂದ್ರದಿಂದ ಅಧಿಕಾರಿಗಳ ಕಣ್ಣು ತಪ್ಪಿಸಿ ಮೂವರು ಪರಾರಿಯಾಗಿದ್ದಾರೆ. ಹೀಗಾಗಿ ಮೂವರು ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

ಎಸ್​ಪಿ ಡಾ. ಸಿ.ಬಿ.ವೇದಮೂರ್ತಿ

ಕ್ವಾರಂಟೈನ್, ಹೋಂ ಕ್ವಾರಂಟೈನ್​​ ಕೇಂದ್ರದಿಂದ ತಪ್ಪಿಸಿಕೊಂಡು ಹೋಗುತ್ತಿರುವ ಬಗ್ಗೆ ಜಿಯೋ ಫೆನ್ಸಿಂಗ್​​​ ಹಾಗೂ ಇ-ಮೇಲ್ ಮೂಲಕ ಮಾಹಿತಿ ಬರುತ್ತಿದೆ. ಅದೇ ರೀತಿ ಈ ಮೂವರು ವ್ಯಕ್ತಿಗಳು ತಪ್ಪಿಸಿಕೊಂಡಿರುವ ಬಗ್ಗೆ ಇ-ಮೇಲ್​​ ಬಂದಿದ್ದು, ಅವರ ವಿರುದ್ಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರ ಪತ್ತೆ ಕಾರ್ಯ ನಡೆದಿದ್ದು, ಪತ್ತೆ ಬಳಿಕ ಪುನಃ ಕ್ವಾರಂಟೈನ್​ ಮಾಡಿ ಬಳಿಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್​ಪಿ ಡಾ. ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.