ETV Bharat / state

ರಾಯಚೂರಿನಲ್ಲಿ ಪಂಚರತ್ನ ರಥಯಾತ್ರೆ: ಡೊಳ್ಳು ಹಾರ, ಜೋಳದ ರೊಟ್ಟಿ ಹಾರ ಹಾಕಿ ಹೆಚ್ಡಿಕೆಗೆ ಅದ್ಧೂರಿ ಸ್ವಾಗತ

ರಾಯಚೂರಿನಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ - ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ - ಡೊಳ್ಳು ಹಾರ, ಜೋಳದ ರೊಟ್ಟಿ ಹಾರ ಹಾಕಿ ಸ್ವಾಗತ

dollu-garland-for-former-cm-kumaraswamy-in-raichur
ರಾಯಚೂರಿನಲ್ಲಿ ಪಂಚರತ್ನ ರಥಯಾತ್ರೆ : ಕುಮಾರಸ್ವಾಮಿ ಡೊಳ್ಳು ಹಾರ ಹಾಕಿ ಅದ್ಧೂರಿ ಸ್ವಾಗತ
author img

By

Published : Jan 24, 2023, 7:16 PM IST

Updated : Jan 24, 2023, 9:44 PM IST

ರಾಯಚೂರಿನಲ್ಲಿ ಪಂಚರತ್ನ ರಥಯಾತ್ರೆ: ಡೊಳ್ಳು ಹಾರ, ಜೋಳದ ರೊಟ್ಟಿ ಹಾರ ಹಾಕಿ ಹೆಚ್ಡಿಕೆಗೆ ಅದ್ಧೂರಿ ಸ್ವಾಗತ

ರಾಯಚೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳು ರಾಜ್ಯ ಪ್ರವಾಸ ನಡೆಸುತ್ತವೆ. ವಿವಿಧ ಯಾತ್ರೆಯ ಮೂಲಕ ಮತದಾರರನ್ನು ತನ್ನತ್ತ ಸೆಳೆಯಲು ಕಸರತ್ತು ನಡೆಸುತ್ತಿದೆ. ಅಲ್ಲದೇ ವಿವಿಧ ಕ್ಷೇತ್ರಗಳಿಗೆ ಆಗಮಿಸುವ ನಾಯಕರನ್ನು ಆಯಾ ಕ್ಷೇತ್ರದ ಜನರು ಭರ್ಜರಿಯಾಗಿ ಬೃಹತ್ ಹಾರಗಳು, ಮೆರವಣಿಗೆ ಮೂಲಕ ವಿಭಿನ್ನವಾಗಿ ಸ್ವಾಗತ ಕೋರುತ್ತಿದ್ದಾರೆ.

ಡೊಳ್ಳು ಹಾರ ಹಾಕಿ ಅದ್ಧೂರಿ ಸ್ವಾಗತ : ಇಂದು ರಾಯಚೂರು ಜಿಲ್ಲೆಗೆ ಆಗಮಿಸಿದ ಪಂಚರತ್ನ ಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಜಿಲ್ಲೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಬೃಹತ್ ಗಾತ್ರದ ಡೊಳ್ಳು ಹಾರವನ್ನು ಹಾಕುವ ಮೂಲಕ ವಿಶೇಷ ಸ್ವಾಗತ ಕೋರಲಾಯಿತು. ಇಷ್ಟು ದಿನ ಹೂವಿನ ಪುಷ್ಪ ವೃಷ್ಠಿ ಮಾಡುವುದು, ಬೃಹತ್ ಗಾತ್ರದ ಹಾರಗಳನ್ನು ಹಾಕುವುದು, ಸೇಬಿನಿಂದ ತಯಾರು ಮಾಡಿದ ಹಾರವನ್ನು ಹಾಕಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲಾಗಿತ್ತು. ಇದೀಗ ಮುದಗಲ್ ನಲ್ಲಿ ಲಿಂಗಸೂಗೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದು ವೈ.ಬಂಡಿ ಅವರು ಡೊಳ್ಳುವಿನಿಂದ ತಯಾರಿಸಿದ ಹಾರವನ್ನು ಹಾಕುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯನ್ನು ವಿನೂತನವಾಗಿ ಸ್ವಾಗತಿಸಿದರು.

ಮುದಗಲ್ ಪಟ್ಟಣದಲ್ಲಿ ಪಂಚರತ್ನ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಹೆಚ್.ಡಿ.ಕುಮಾರಸ್ವಾಮಿ ಇಂದಿನಿಂದ ಆರು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಸಲಿದ್ದಾರೆ. ಇಂದು ಪರಿಶಿಷ್ಟ ಸಮುದಾಯದ ಮೀಸಲು ಕ್ಷೇತ್ರವಾಗಿರುವ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಆರಂಭಿಸಿದರು. ಲಿಂಗಸೂಗೂರು ಕೇತ್ರದ ಅಭ್ಯರ್ಥಿ ಸಿದ್ದು ವೈ.ಬಂಡಿ ಪರವಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಬಳಿಕ ಕ್ಷೇತ್ರದ ಗುರುಗುಂಟಾ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ದಾಖಲೆಪುಟ ಸೇರಿರುವ ಹಾರಗಳು: ನವೆಂಬರ್ 18ರಿಂದ ಮಾಜಿ ಮುಖ್ಯಮಂತ್ರಿ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಕೈಗೊಂಡಿದ್ದರು. ಇನ್ನು ಇವರು ಕೈಗೊಂಡಿರುವ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ರಾಜ್ಯದ ಜನರು ವಿವಿಧ ಬಗೆಯ ಬೃಹತ್ ಹಾರಗಳನ್ನು ಹಾಕಿ ಗೌರವಿಸಿದ್ದರು. ಇದರಿಂದಾಗಿ ಕುಮಾರಸ್ವಾಮಿ ಅವರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಪಾತ್ರರಾಗಿದ್ದರು. ಇನ್ನು ತುಮಕೂರು ಗ್ರಾಮಾಂತರ ಕ್ಷೇತ್ರವೊಂದರಲ್ಲೇ 30 ಹಾರಗಳನ್ನು ಹಾಕಲಾಗಿತ್ತು. ಈ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ದಾಖಲೆ ಬರೆದಿದ್ದರು.

ಮಾಜಿ ಮುಖ್ಯಮಂತ್ರಿಗಳಿಗೆ ಹಾರಗಳ ಸ್ವಾಗತ : ಪಂಚರತ್ನ ಯಾತ್ರೆ ಇದೀಗ ರಾಯಚೂರಿನಲ್ಲಿ ನಡೆಯುತ್ತಿದೆ. ಈ ಹಿಂದೆ ತುಮಕೂರು ಗ್ರಾಮಾಂತರ ಕ್ಷೇತ್ರವೊಂದರಲ್ಲೇ 30ಕ್ಕೂ ಹೆಚ್ಚು ಬೃಹತ್ ಹಾರಗಳನ್ನು ಮಾಜಿ ಮುಖ್ಯಮಂತ್ರಿಗಳಿಗೆ ಹಾಕಿ ಗೌರವಿಸಲಾಗಿತ್ತು. ಇಲ್ಲಿ ಸೇಬು, ಸೌತೆಕಾಯಿ, ಕೊಬ್ಬರಿ, ಕಬ್ಬಿನ ಹಾರಗಳ ಜತೆಗೆ ನಾಣ್ಯದ ಹಾರ, ಭತ್ತ ನೇಗಿಲು ಹಾರ, ಎತ್ತಿನ ಲಾಳದ ಹಾರ, ಜೆಡಿಎಸ್ ಚಿಹ್ನೆ ಹಾರ, ಮಣ್ಣಿನ ಹಾರ, ಕಿರೀಟದ ಹಾರ, ಕರ್ಜಿಕಾಯಿ ಹಾರ, ವಿವಿಧ ತರಕಾರಿಗಳ ಹಾರ, ವಿವಿಧ ಹಣ್ಣುಗಳ ಹಾರ, ಎಲ್ ಇ ಡಿ ಹಾರ ಸೇರಿದಂತೆ ಒಂದೇ ದಿನ 30ಕ್ಕೂ ಹೆಚ್ಚು ಹಾರಗಳನ್ನು ಕುಮಾರಸ್ವಾಮಿ ಅವರಿಗೆ ಹಾಕಿ ಸ್ವಾಗತಿಸಲಾಗಿತ್ತು.

ಬೃಹತ್​ ಗಾತ್ರದ ಜೋಳದ ರೊಟ್ಟಿ ಹಾರ ಹಾಕಿ ಸ್ವಾಗತ : ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಿಂದ ಜೆಡಿಎಸ್ ಪಂಚರತ್ನ ಯಾತ್ರೆ, ಲಿಂಗಸೂಗೂರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಯಾತ್ರೆ ಮೆರವಣಿಗೆಯಲ್ಲಿ ಹೆಚ್ಡಿಕೆಗೆ ಸಾವಿರಾರು ರೊಟ್ಟಿಗಳಿಂದ ತಯಾರಿಸಿದ ಬೃಹತ್ ಗಾತ್ರದ ಜೋಳದ ರೊಟ್ಟಿ ಹಾರವನ್ನು ಹಾಕುವ ಮೂಲಕ ವಿಭಿನ್ನವಾಗಿ ಸ್ವಾಗತ ಕೋರಲಾಯಿತು.

ಇದನ್ನೂ ಓದಿ : ಏಷ್ಯಾ​, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಹೆಚ್​ಡಿಕೆ ಸ್ವಾಗತಿಸುವ ಬೃಹತ್​ ಹಾರಗಳು..

Last Updated : Jan 24, 2023, 9:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.