ರಾಯಚೂರು: ಸಿರವಾರ ತಾಲೂಕಿನ ಕವಿತಾಳ ಸಮುದಾಯ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ವೃದ್ಧನಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಸಾನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಕವಿತಾಳ ಗ್ರಾಮದ ರಂಗಪ್ಪ(70) ಮೃತ ವೃದ್ಧ ಎಂದು ಗುರುತಿಸಲಾಗಿದೆ. ಉಸಿರಾಟದ ತೊಂದರೆಯಿಂದಾಗಿ ರಂಗಪ್ಪನ್ನಿಗೆ ಕವಿತಾಳ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆ ಕರೆತರಲಾಗಿತ್ತು. ಆದರೆ ರಾತ್ರಿ 8ಗಂಟೆಯಿಂದ 12 ಗಂಟೆಯ ಮಧ್ಯೆ ಒಬ್ಬ ವೈದ್ಯ ಕೂಡ ಆಸ್ಪತ್ರೆಗೆ ಬಂದಿಲ್ಲವವಂತೆ. ಇದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯಾದ ಕಾರಣ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನಮ್ಮೂರು ಆಸ್ಪತ್ರೆ ಅಂತ ಹೇಳುವ ವೈದ್ಯರು, ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಬೇಜವಾಬ್ದಾರಿ ವರ್ತನೆ ತೋರಿದರೆ ಹೇಗೆ? ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಬಂದಾಗ ವೈದ್ಯರು ಇರಲಿಲ್ಲವೆಂದರೆ ಹೇಗೆ ಎಂದು ವೃದ್ಧನ ಸಂಬಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.