ರಾಯಚೂರು: ಕನಕಪುರ ಕ್ಷೇತ್ರದ ಬಗ್ಗೆ ಇರುವ ಅಭಿಮಾನ ಮಸ್ಕಿ ಕ್ಷೇತ್ರದ ಮೇಲೂ ಇದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಬಂದಾಗ ನನಗೆ ಅದ್ದೂರಿ ಸ್ವಾಗತ ಕೋರುವುದಲ್ಲದೇ ಪ್ರೀತಿ ಕೂಡ ತೋರಿದ್ದೀರಾ. ಕನಕಪುರದ ಮೇಲೆ ಇರುವಷ್ಟು ಅಭಿಮಾನ ನಿಮ್ಮ ಕ್ಷೇತ್ರದ ಮೇಲೆಯೂ ಇದೆ. ಉಪಚುನಾವಣೆಯಲ್ಲಿ ಬಸವನಗೌಡ ತುರುವಿಹಾಳರನ್ನು ಬೆಂಬಲಿಸಿ ಎಂದರು.
ಮಾಜಿ ಶಾಸಕ ಪ್ರತಾಪ್ ಗೌಡ ಈ ಹಿಂದೆ ಒಂದು ಬಾರಿಯೂ ಕ್ಷೇತ್ರದ ರೈತರ ಸಮಸ್ಯೆ ಬಗ್ಗೆ ಬಂದು ನನ್ನ ಬಳಿ ಮಾತನಾಡಿಲ್ಲ. ಅವರಿಗೆ ಯಾವ ರೈತರ ಬಗ್ಗೆಯೂ ಕಾಳಜಿಯಿಲ್ಲ. ಒಂದು ಮಾತನ್ನೂ ಕೇಳದೆ ರಾಜಿನಾಮೆ ಕೊಟ್ಟು ಹೋಗಿದ್ದಾರೆ. ಈ ಬಾರಿಯಲ್ಲ ಮುಂದೆಯೂ ಅವರು ಗೆಲ್ಲಲ್ಲ ಎಂದರು.
ಬಿಜೆಪಿ ಸರ್ಕಾರ ಕೊರೊನಾ ಲಾಕ್ ಡೌನ್ ವೇಳೆ ಯಾರಿಗೂ ಪರಿಹಾರ ನೀಡಲಿಲ್ಲ. ಸುಳ್ಳು ಹೇಳುವ ಈ ಸರ್ಕಾರಕ್ಕೆ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು ಎಂದು ಪ್ರತಾಪ್‌ಗೌಡ ಹಾಗೂ ಬಿಜೆಪಿ ವಿರುದ್ದ ಹರಿಹಾಯ್ದರು.
ಇದನ್ನೂ ಓದಿ: 'ರಾಜ್ಯದಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ ಇಲ್ಲ': ನಿಮಗೆ ಗೊತ್ತಿರಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ..