ETV Bharat / state

ರಾಯಚೂರು ಸಮನ್ವಯ ಸಮಿತಿ ಸಭೆ: ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಂಸದರ ಸೂಚನೆ - District Development Coordination and Steering Committee Meeting Raichur

ರಾಯಚೂರಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೊಪ್ಪಳ‌ ಸಂಸದ ಸಂಗಣ್ಣ ಕರಡಿ ಹಾಗೂ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ನೇತೃತ್ವದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಸಭೆಗೆ ಗೈರಾದ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ಸಂಸದರು ಸೂಚಿಸಿದ್ದಾರೆ.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
author img

By

Published : Nov 15, 2019, 7:15 AM IST

Updated : Nov 15, 2019, 7:26 AM IST

ರಾಯಚೂರು: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೊಪ್ಪಳ‌ ಸಂಸದ ಸಂಗಣ್ಣ ಕರಡಿ ಹಾಗೂ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ನೇತೃತ್ವದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.

ಸಭೆಯ ಆರಂಭದಲ್ಲಿ ಜಿಲ್ಲೆಯ ಸಿಂಧನೂರು ದೇವದುರ್ಗ ಹಾಗೂ ವಿವಿಧ ತಾಲೂಕಿನ ಮುಖ್ಯರಸ್ತೆ ಕಾಮಗಾರಿ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ರಾಯಚೂರು ಸಂಸದ ರಾಜ ಅಮರೇಶ್ವರ ನಾಯಕ್ ಅವರು, ಕಾಮಗಾರಿಗಳ ಅವಧಿಯ ಗಡುವು ಮುಗಿದರೂ ಏಕೆ ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಾಯಚೂರಿನಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

ಅಲ್ಲದೆ ಸಭೆಯಲ್ಲಿ ಈ ಕುರಿತು ಮಾಹಿತಿ ಹೇಳಲು ಪಿಡಬ್ಲ್ಯೂಡಿ ಹಿರಿಯ ಅಧಿಕಾರಿಗಳು ಗೈರಾಗಿದ್ದರು. ಅನ್ಯ ಕೆಲಸದ ನಿಮಿತ್ತ ಸಿಂಧನೂರಿಗೆ ತೆರಳಿದ್ದಾರೆ ಎಂದು ಕಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದಾಗ ಅಸಮಾಧಾನಗೊಂಡ ಸಂಸದರು, ಸಭೆಯ ಮಹತ್ವ ಅರಿಯದೇ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಅವರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಮುನಿರಾಬಾದ್ - ಮಹೆಬೂಬ್ ನಗರ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿ ಕುರಿತು ಮಾಹಿತಿ ಕೇಳಿದಾಗ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ವಿಧವಾ, ವೃದ್ಧಾಪ್ಯ ಸೇರಿದಂತೆ ವಿವಿಧ ಸಾಮಾಜಿಕ ಯೋಜನೆಯಡಿ ಫಲಾನುಭವಿಗಳ ಆನ್​ಲೈನ್ ಪ್ರಕ್ರಿಯೆಯ ಮಂದಗತಿಯ ಜಾರಿಯ ಕುರಿತು ಅಸಮಧಾನ ವ್ಯಕ್ತ ಪಡಿಸಿದರು. ಫಲಾನುಭವಿಗಳ ಆಧಾರ್ ಜೋಡಣೆ ಮಾಡಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ತಾಂತ್ರಿಕ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕು ಎಂದು ಉಭಯ ಸಂಸದರು ತಾಕೀತು ಮಾಡಿದರು.

ಇದರ ಜೊತೆಗೆ ಸ್ವಚ್ಛ ಭಾರತ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಪಿಎಂಎವೈ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

Intro:ರಾಯಚೂರಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ಕೊಪ್ಪಳ‌ಸಂಸದ ಸಂಗಣ್ಣ ಕರಡಿ ಹಾಗೂ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ನೇತೃತ್ವದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ( Disha) ಸಭೆ ನಡೆಯಿತು.

Body:ಸಭೆಯ ಆರಂಭದಲ್ಲಿ ಜಿಲ್ಲೆಯ ಸಿಂಧನೂರು ದೇವದುರ್ಗ ಹಾಗೂ ವಿವಿಧ ತಾಲೂಕಿನ ಮುಖ್ಯರಸ್ತೆ ಕಾಮಗಾರಿ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ರಾಯಚೂರು ಸಂಸದ ರಾಜ ಅಮರೇಶ್ವರ ನಾಯಕ್ ಕಾಮಗಾರಿಗಳ ಗಡುವು ಮುಗಿದರೂ ಏಕೆ ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಸಭೆಯಲ್ಲಿ ಈ ಕುರಿತು ಮಾಹಿತಿ ಹೇಳಲು ಪಿಡಬ್ಲ್ಯೂಡಿ ಹಿರಿಯ ಅಧಿಕಾರಿಗಳು ಸಭೆಗೆ ಹಾಜರಾಗದ ಕಾರಣ ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿದಾಗ ಅನ್ಯ ಕೆಲಸದ ನಿಮಿತ್ತ ಸಿಂಧನೂರಿಗೆ ತೆರಳಿದ್ದಾರೆ ಎಂದಾಗ ಆಕ್ರೋಶ ಗೊಂಡು ಸಭೆಯ ಮಹತ್ವ ಅರಿಯದೇ ಬೇಜವಾಬ್ದಾರಿಯಿಂದ ವರ್ತಿಸಿದ್ದು ನೋಟಿಸ್ ನೀಡಲು ಡಿಸಿ ವೆಂಕಟೇಶ ಕುಮಾರ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮುನಿರಾಬಾದ್ - ಮಹೆಬೂಬ್ ನಗರ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿ ಕುರಿತು ಮಾಹಿತಿ ಕೇಳಿದಾಗ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ವಿಧವಾ,ವೃದ್ಯಾಪ್ಯ ಸೇರಿದಂತೆ ವಿವಿಧ ಸಾಮಾಜಿಕ ಯೋಜನೆಯಡಿ ಫಲಾನುಭವಿಗಳ ಆನ್ ಲೈನ್ ವ್ಯವಸ್ಥೆ ಮಾಡುವ ಪ್ರಕ್ರಿಯೆಯಲ್ಲಿ ಮಂದಗತಿಯ ಕುರಿತು ಅಸಮಧಾನ ವ್ಯಕ್ತ ಪಡಿಸಿದ ಉಭಯ ಸಂಸದರು ಫಲಾನುಭವಿಗಳ ಆಧಾರ್ ಜೋಡಣೆ ಮಾಡಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ತಾಂತ್ರಿಕ ಸಮಸ್ಯೆಗೆ ಪರಿಹಾರ ಮುಂದಾಗಬೇಕು ಎಂದು ತಾಕೀತು ಮಾಡಿದರು.
ಅಲ್ಲದೇ ಸ್ವಚ್ಛ ಭಾರತ ಯೋಜನೆ, ಕೃಷಿ ಸಿಂಚಾಯಿ ಯೋಜನೆ,ಪಿಎಂಎವೈ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಗೈರು : ಪ್ರಸ್ತುತ ಲೋಕಸಭೆಯ ಚುನಾವಣೆಯ ನಂತರ ಮೊದಲ ಬಾರಿಗೆ ನಡೆದ ಸಭೆ ಕಾಟಾಚಾರಕ್ಕೆಂಬಂತೆ ನಡೆಯಿತು,ಏಕೆಂದರೆ ಸಭೆಯಲ್ಲಿ ಶಾಸಕ‌ರಾದ‌ ಶಿವನಗೌಡ ನಾಯಕ,ಡಾ.ಶಿವರಾಜ್ ಪಾಟೀಲ್,ದದ್ದಲ್ ಬಸನಗೌಡ, ಡಿಎಸ್.ಹುಲಿಗೇರಿ ಸೆರಿದಂತೆ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಬೋಸರಾಜು,ಬಸವರಾಜ ಪಾಟೀಲ್ ಇಟಗಿ‌, ಶರಣಪ್ಪ‌ಮಟ್ಟೂರು ಸೇರಿದಂತೆ ಜಿಲ್ಲಾ ಪಂಚಾಯತಿಯ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರು‌ ಹಾಗೂ ಹಿರಿಯ ಅಧಿಕಾರಿಗಳು ಗೈರಾಗಿದ್ದು ಕಂಡು‌ಬಂತು.

Conclusion:
Last Updated : Nov 15, 2019, 7:26 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.