ರಾಯಚೂರು : ಜಿಲ್ಲೆಯ ಲಿಂಗಸುಗೂರು ಪುರಸಭೆ ವಾರ್ಡ್ -15 ಸದಸ್ಯ ಪ್ರಮೋದ ಕುಲಕರ್ಣಿ ಬಡವರಿಗೆ ಪಡಿತರ ಕಿಟ್ ವಿತರಿಸಿದರು.
ಕಳೆದ 38 ದಿನಗಳಿಂದ ತಮ್ಮ ವಾರ್ಡ್ನ ಬಹುತೇಕ ಬಡವರು, ಅಸಹಾಯಕರು, ಕೂಲಿ ಕೆಲಸ ಮಾಡುವ ಜನತೆಗೆ ಪಡಿತರ ದಿನಸಿ ಹಂಚಿದರು.
ಪುರಸಭೆ 23 ವಾರ್ಡ್ಗಳಲ್ಲಿ ಯಾವೊಬ್ಬ ಸದಸ್ಯರೂ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಬಡವರನ್ನು ಸಹಾಯಕ್ಕೆ ಮುಂದೆ ಬಂದಿಲ್ಲ. ಕುಲಕರ್ಣಿ ಅವರ ಕಾರ್ಯ ಮಾದರಿ ಎಂದು ಸಮಾಜ ಸೇವಕ ಅಕ್ರಮಪಾಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲಸ ಸಿಗದೆ ಕುಟುಂಬ ನಿರ್ವಹಣೆ ಕಷ್ಟವಾಗಿರುವ ಕುಟುಂಬಳಿಗೆ ಪಡಿತರ ಕಿಟ್ ನೀಡಿ ಆತ್ಮಸ್ಥೈರ್ಯ ತುಂಬಿದರು.