ರಾಯಚೂರು: ಗ್ರಾಮೀಣ ಪೋಲೀಸ್ ಠಾಣೆ ಹಾಗೂ ಶಕ್ತಿನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಮಲ್ಲು ಅಲಿಯಾಸ್ ಮಲ್ಯ, ರವಿ, ಯಲ್ಲಾಲಿಂಗ, ಹನುಮಂತ, ಶ್ಯಾಮ್ ಸುಂಗ್, ಗಿಡ್ಯ ಅಲಿಯಾಸ್ ಸರ್ಫ್ಯುದ್ದೀನ್ ಬಂಧಿತ ಆರೋಪಿಗಳು.
ಒಟ್ಟು 5 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ 196 ಗ್ರಾಂ ಬಂಗಾರದ ಆಭರಣ, 500 ಗ್ರಾಂ ಬೆಳ್ಳಿಯ ಆಭರಣ ಸೇರಿ ಒಟ್ಟು 5,62,550 ರೂ.ಬೆಲೆ ಬಾಳುವ ವಸ್ತುಗಳು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಕ್ರೂಸರ್ ಜೀಪ್ ಹಾಗೂ ಇತರೆ ವಸ್ತು ವಶಪಡಿಸಿಕೊಳ್ಳಲಾಗಿದೆ.