ರಾಯಚೂರು: ಶಂಕಿತ ಕೊರೊನಾ ಲಕ್ಷಣಗಳು ಕಂಡ ಬಂದ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ಇಂದು ಐವರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ರಾಯಚೂರು ಜಿಲ್ಲೆಯಿಂದ ಇದುವರೆಗೂ 100 ಜನರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆ ಪೈಕಿ, 65 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನೂ 35 ಜನರ ವರದಿ ಬರುವುದು ಬಾಕಿ ಉಳಿದಿದೆ. ಪ್ರಸ್ತುತ 27 ಜನರು ಆಸ್ಪತ್ರೆ ಕ್ವಾರಂಟೈನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೂ 22 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇನ್ನೂ, ಸರ್ಕಾರಿ ಕಟ್ಟಡದ ದಿಗ್ಬಂಧನದಲ್ಲಿ ಬುಧವಾರ ಹೊಸದಾಗಿ 110 ಜನರನ್ನು ಸೇರಿಸಲಾಗಿದ್ದು, ಒಟ್ಟು 232 ಜನರು ದಿಗ್ಬಂಧನದಲ್ಲಿದ್ದಂತಾಗಿದೆ.