ETV Bharat / state

ರಾಯಚೂರು ಜಿಲ್ಲಾ ಕ್ರೀಡಾಂಗಣದ ಹಿಂದೆ ರಾಶಿ ರಾಶಿ ಕಾಂಡೋಮ್ ಪ್ಯಾಕೇಟ್ ಪತ್ತೆ.. - ರಾಯಚೂರು ಜಿಲ್ಲೆ

ಜಿಲ್ಲಾ ಕ್ರೀಡಾಂಗಣದ ಹಿಂದಿನ ರೈಲ್ವೆ ಟ್ರ್ಯಾಕ್ ಹತ್ತಿರ ರಾಶಿ ರಾಶಿ ಬಳಕೆಯಾಗದ ಕಾಂಡೋಮ್ ಪ್ಯಾಕೇಟ್​ಗಳು ಪತ್ತೆಯಾಗಿವೆ. ಇದನ್ನ ಕಂಡ ಪ್ರತಿಷ್ಠಿತ ಬಡಾವಣೆಯಾದ ನಿಜಲಿಂಗಪ್ಪ ಕಾಲೋನಿಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರು ಜಿಲ್ಲಾ ಕ್ರೀಡಾಂಗಣದ ಹಿಂದೆ ರಾಶಿ ರಾಶಿ ಕಾಂಡೋಮ್ ಪ್ಯಾಕೇಟ್ ಪತ್ತೆ
author img

By

Published : Sep 29, 2019, 11:38 AM IST

ರಾಯಚೂರು: ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಹಿಂದೆ ಸಾಲು ಸಾಲು ಕಾಂಡೋಮ್​ ಪ್ಯಾಕೇಟ್​ಗಳು ಪತ್ತೆಯಾಗಿವೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ತೀವ್ರ ಮುಜುಗರ ತರಿಸಿದೆ.

ಜಿಲ್ಲಾ ಕ್ರೀಡಾಂಗಣದ ಹಿಂದೆ ರಾಶಿ ರಾಶಿ ಕಾಂಡೋಮ್ ಪ್ಯಾಕೇಟ್..

ಜಿಲ್ಲಾ ಕ್ರೀಡಾಂಗಣದ ಹಿಂದಿನ ರೈಲ್ವೆ ಟ್ರ್ಯಾಕ್ ಹತ್ತಿರ ರಾಶಿ ರಾಶಿ ಬಳಕೆಯಾಗದ ಕಾಂಡೋಮ್ ಪ್ಯಾಕೇಟ್​ಗಳು ಪತ್ತೆಯಾಗಿವೆ. ಇದಕ್ಕೆ ಇಲ್ಲಿನ ಪ್ರತಿಷ್ಠಿತ ಬಡಾವಣೆಯಾದ ನಿಜಲಿಂಗಪ್ಪ ಕಾಲೋನಿಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಟೇಡಿಯಂನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆಯೇ ಎಂಬ ಶಂಕೆ ಮೂಡಿಸಿದೆ. ಆದರೆ, ಬಳಕೆಯಾಗಿಲ್ಲದಿರುವ ಇಷ್ಟೊಂದು ಕಾಂಡೋಮ್‌ ಪ್ಯಾಕೇಟ್‌ಗಳನ್ನ ಯಾರು ಅದು ಗ್ರೌಂಡ್‌ನ ಹಿಂಬದಿಯೇ ಎಸೆದು ಹೋಗಿದ್ದಾರೆಂಬುದು ತಿಳಿಯುತ್ತಿಲ್ಲ. ಈ ರೈಲ್ವೆ‌‌ ಟ್ರ್ಯಾಕ್‌ಗೆ ಹೊಂದಿಕೊಂಡು ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆ ಹಾಗೂ ಪಕ್ಕದಲ್ಲಿ ಖಾಸಗಿ ಶಾಲೆಗಳಿವೆ. ಸರಿಯಾದ ಬೀದಿ ದೀಪಗಳನ್ನೂ ಅಳವಡಿಸಿಲ್ಲ. ಕುಡುಕರ ಹಾವಳಿಯೂ ಈ ಪ್ರದೇಶದಲ್ಲಿ ಹೆಚ್ಚಿದೆ. ವಿದ್ಯಾರ್ಥಿಗಳು ಕೂಡ ಇದೇ ಮಾರ್ಗವಾಗಿ ಸಂಚರಿಸ್ತಾರೆ. ಹಾಗಾಗಿ ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Intro:ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಲು ಬೇಕಾಗಿರುವ ಶಿಶ್ನ ಚೀಲ(ಕಾಂಡೋಮ್ ) ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಹಿಂದೆ ಸಾಲು ಸಾಲು ಪ್ಯಾಕೆಟ್ ಪತ್ತೆಯಾಗಿದೆ.

Body:ಯುವಕರು ಹಾಗೂ ದಾಂಪತ್ಯ ಪುರುಷರು ಸುರಕ್ಷಿಸಿ ಲೈಂಗಿಕ ಕ್ರಿಯೆ ನಡೆಸಲು ಬಳಕೆಯಾಗಲು ಸರಕಾರದಿಂದ ನಿಗದಿತ ಸ್ಥಳಗಳಲ್ಲಿ ಉಚಿತವಾಗಿ ವಿತರಣೆ ಮಾಡುತ್ತದೆ ಇದರಿಂದ ಯಾವುದೇ ಲೈಂಗಿಕ ರೋಗ ಬಾರದೇ ಇರಲಿ ಎಂದು ಸರಕಾರದ ಉದ್ದೇಶವೂ ಇದೆ.
ಆದ್ರೆ ಜಿಲ್ಲಾ ಕ್ರಿಡಾಂಗಣದ ಹಿಂದಿನ ರೈಲ್ವೆ ಟ್ರ್ಯಾಕ್ ಹತ್ತಿರ ಅವಧಿ ಮುಗಿಯದ ಕಾಂಡೋಮ್ ಪ್ಯಾಕೆಟ್ಗಳು ಪತ್ತೆಯಾಗಿದ್ದು‌ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ,ಯಾರು ಈ ಸಾಲು ಸಾಲು ಕಾಂಡೋಮ್ ಬಿಡಾಡಿರಬಹುದು ಮತ್ತು ಏಕೆ ಅವಧಿ ಮುಗಿಯದಿದ್ದರೂ ರೈಲ್ವೆ ಹಳಿಯ ಬದಿಯಲ್ಲಿ ಎಸೆಯಲಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ಈ ಸಾಲು ಸಾಲು ಕಾಂಡೋಮ್ ಗಳ ಪತ್ತೆಯಿಂದ ಸ್ಟೇಡಿಯಂ ಹಿಂದಿನ ಪ್ರತಿಷ್ಠಿತ ಬಡಾವಣೆಯಾದ ನಿಜಲಿಂಗಪ್ಪ ಕಾಲೋನಿಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಹಲವಾರು ದಿನಗಳಿಂದ ರೈಲ್ವೆ ಹಳಿ ನಿರ್ಮಾಣ ಹಂತದಲ್ಲಿರುವ ಸ್ಟೇಡಿಯಂ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು ಕಿಡಿಗೇಡಿಗಳು ಬಿಸಾಡಿರಬಹುದು ಇದು ನಮಗೆ ತೀರ ಮುಜುಗರ ತರುವಂತಹದ್ದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಈ‌ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ಗಮನಿಸಬೇಕಾದ ವಿಚಾರವೆಂದರೆ ಈ ರೈಲ್ವೆ‌‌ ಟ್ರ್ಯಾಕ್ ಗೆ ಹೊಂದಿಕೊಂಡು ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆ ಹಾಗೂ ಪಕ್ಕದಲ್ಲಿ ಖಾಸಗಿ ಶಾಲೆ ಗಳಿದ್ದು ವಿದ್ಯಾರ್ಥಿಗಳು ಇಲ್ಲಿಂದ ಹೋಗಬೇಕಾದರೆ ತೀವ್ರ ಮುಜುಗರಕ್ಕೆ ಈಡುಮಾಡಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.