ರಾಯಚೂರು: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ನೆರೆ ಪರಿಹಾರ ಶೀಘ್ರದಲ್ಲಿ ಬರಲಿದೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನ ಕೇಂದ್ರ ಸರಕಾರ ತಿರಸ್ಕರಿಸಿಲ್ಲ. ನೆರೆ ಪರಿಹಾರದ ಬಗ್ಗೆ ಹಣಕಾಸು ಸಚಿವರು ವಿಚಾರಿಸುತ್ತಿದ್ದಾರೆ. ಪರಿಹಾರ ಬಂದೇ ಬರಲಿದ್ದು, ಸ್ವಲ್ಪ ವಿಳಂಬವಾಗಿದೆ. ಸ್ವ-ಪಕ್ಷದವರಿಂದಲೇ ಕೇಂದ್ರ ಸರಕಾರ ನಡೆಗೆ ವಿರೋಧಿಸಿದ್ದಾರೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ಪ್ರಜಾಪ್ರಭುತ್ವ ಪಕ್ಷವಾಗಿದೆ. ಆದ್ದರಿಂದ ತಮ್ಮ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಅದಷ್ಟು ಬೇಗ ಕೇಂದ್ರದಿಂದ ನೆರೆ ಪರಿಹಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.