ರಾಯಚೂರು: ತಾಲೂಕಿನ ಏಗನೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡುತ್ತಿರುವ ಜಿಂಕೆಗಳನ್ನು ಬೇಟೆಯಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ವಿಮಾನ ನಿಲ್ದಾಣಕ್ಕಾಗಿ ಕಾಯ್ದಿರಿಸಿರುವ ಜಮೀನು ಹಾಗೂ ಸುತ್ತಮುತ್ತಲಿನ ರೈತರ ಹೊಲಗಳಲ್ಲಿ ನಿತ್ಯ ಸುಮಾರು 40ಕ್ಕೂ ಹೆಚ್ಚು ಜಿಂಕೆಗಳು ತಂಡ ತಂಡವಾಗಿ ಜಮೀನುಗಳಲ್ಲಿ ಓಡಾಡುತ್ತವೆ. ಜಿಂಕೆಗಳು ಬಂದಿವೆ ಎಂಬ ಮಾಹಿತಿ ತಿಳಿದ ಕೆಲವರು ವೀಕ್ ಡೇ ದಿನಗಳಲ್ಲಿ ಅವುಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೇಟೆಯಿಂದಾಗಿ ಪ್ರಾಣಿಗಳಿಗೆ ಜಿಲ್ಲೆಯಲ್ಲಿ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ, ಸಂಬಂಧಿಸಿದ ಅರಣ್ಯ ಇಲಾಖೆಯವರು ಜಿಂಕೆಗಳನ್ನು ರಕ್ಷಣೆ ಮಾಡಲು ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್ ಏಗನೂರು ಒತ್ತಾಯಿಸಿದ್ದಾರೆ.
ಓದಿ: ಶಿಕ್ಷಣ ಸಚಿವರ ಹೇಳಿಕೆ ಬೇಜವಾಬ್ದಾರಿಯುತ, ಕ್ರೂರತನದಿಂದ ಕೂಡಿದೆ: ಸಿದ್ದರಾಮಯ್ಯ ಆಕ್ರೋಶ