ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಮೂರನೇ ಮೈಲ್ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ಹೈಟೆನ್ಷನ್ ವೈರನ್ನ ತೆರವು ಮಾಡಲಾಗಿದೆ.
ಈಟಿವಿ ಭಾರತ್ನಲ್ಲಿ 2019 ನವೆಂಬರ್ 29ರಂದು ''ಬಲಿಗಾಗಿ ಬಾಯ್ತೆರೆದು ನಿಂತ ಹೈಟೆನ್ಷನ್ ವಿದ್ಯುತ್ ವೈರ್... ಜೀವ ಭಯದಲ್ಲೇ ಮಕ್ಕಳ ವಿದ್ಯಾಭ್ಯಾಸ..'' ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.
ಈ ವರದಿಯಿಂದ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಶಾಲೆಯ ಕಟ್ಟಡದ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ಹೈಟೆನ್ಷನ್ ವೈರನ್ನ ತೆರವುಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಜೀವಭಯ ದೂರವಾಗುವಂತೆ ಮಾಡಿದ್ದಾರೆ.ಇನ್ನು ವರದಿ ಪ್ರಸಾರ ಮಾಡಿ ವಿದ್ಯುತ್ ಹೈಟೆನ್ಷನ್ ವೈರ್ ತೆರವುಗೊಳಿಸಲು ಸಹಕರಿಸಿ, ಶಾಲೆ ಶಿಕ್ಷಕರು ಹಾಗೂ ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ ಈಟಿವಿ ಭಾರತ್ಗೆ ಶಾಲಾ ಮುಖ್ಯೋಪಾಧ್ಯಾಯರು ಧನ್ಯವಾದ ತಿಳಿಸಿದ್ದಾರೆ.