ರಾಯಚೂರು: ಋತುಮಾನದ ಹಣ್ಣು ಎಂದೇ ಖ್ಯಾತಿಗಳಿಸಿರುವ ಸೀತಾಫಲ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ನಗರದ ಜೈನ್ ಮಂದಿರ ರಸ್ತೆ ಹಾಗೂ ಎಲ್ಐಸಿ ಕಚೇರಿ ಮುಂಭಾಗದಲ್ಲಿ ಪ್ರತಿವರ್ಷ ಈ ಸಮಯದಲ್ಲಿ ಸೀತಾಫಲ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ.
ಹಣ್ಣುಗಳ ಗಾತ್ರದ ಮೇಲೆ ಬೆಲೆ ನಿಗದಿ ಯಾಗುತ್ತಿದ್ದು, ಪ್ರಸ್ತುತ 100 ರೂ. ರಿಂದ 50 ರೂ.ಗೆ ಕೆಜಿಯಂತೆ ಮಾರಾಟವಾಗುತ್ತಿದೆ. ನಗರದ ಹಣ್ಣಿನ ಅಂಗಡಿಗಳ ಬೆಲೆಗಿಂತ ಕಡಿಮೆ ಹಾಗೂ ಉತ್ತಮ ತಾಜಾ ಹಣ್ಣುಗಳು ರಸ್ತೆ ಬದಿಯ ವ್ಯಾಪಾರಿಗಳಲ್ಲಿ ಲಭ್ಯವಿರುವ ಕಾರಣ ಹಣ್ಣು ಪ್ರಿಯರು ದೂರದಿಂದ ಬಂದು ಖರೀದಿಸುತ್ತಿದ್ದಾರೆ.
ಹಣ್ಣು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲ: ನಗರದಲ್ಲಿ ಹಲವಾರು ವರ್ಷಗಳಿಂದ ಹಣ್ಣಿನ ಋತುಮಾನದಲ್ಲಿ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿಯೇ ಹಣ್ಣಿನ ವ್ಯಾಪಾರ ನಡೆಯುತ್ತಿದ್ದು, ಹಣ್ಣು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ರೆ ಅನುಕೂಲಕರವಾಗಲಿದೆ ಎನ್ನುತ್ತಾರೆ ಮಾರಾಟಗಾರರು.
ಕಳೆದ ಎಂಟು ವರ್ಷಗಳಿಂದ ನೆರೆ ರಾಜ್ಯ ತೆಲಂಗಾಣದ ಮಹಬೂಬ್ ನಗರದಿಂದ ಹಣ್ಣುಗಳನ್ನು ತಂದು ಇಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ದೂರ ದೂರದಿಂದ ಬಂದು ಗ್ರಾಹಕರು ಹಣ್ಣು ತೆಗೆದುಕೊಂಡು ಹೋಗುತ್ತಿದ್ದಾರೆ.