ರಾಯಚೂರು: ನನ್ನ ಕನ್ನಡಾಭಿಮಾನದ ಬಗ್ಗೆ ಯಾರೂ ಸಂಶಯ ವ್ಯಕ್ತಪಡಿಸುವುದು ಬೇಡ. ಕನ್ನಡಿಗನಾಗಿ ನಾನು ನನ್ನ ಕೆಲಸ ಮಾಡಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ರು.
ನ್ಯಾಯಾಲಯದ ತೀರ್ಪಿನಲ್ಲಿ ರಾಷ್ಟ್ರ ಧ್ವಜವನ್ನೇ ಬಳಸಿಕೊಳ್ಳಬೇಕು ಎಂದು ಹೇಳಿದ್ದೆ. ಸಿದ್ದರಾಮಯ್ಯನವರು ಸುಮಾರು 40 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ಪ್ರೇಮ ಇರಲಿಲ್ವೇ? ಆಗ ಏಕೆ ಈ ವಿಷಯದ ಕುರಿತು ಪ್ರಸ್ತಾಪ ಮಾಡಲಿಲ್ಲ. ಮತಗಳ ಕ್ರೋಡೀಕರಣ ಮಾಡಿಕೊಳ್ಳುವ ಉದ್ದೇಶದಿಂದ ಅವರು ಹಲವು ನಾಟಕಗಳನ್ನಾಡಿದರು. ಅದರಲ್ಲಿ ಒಂದು ಕನ್ನಡದ ನಾಟಕವು, ಇನ್ನೊಂದು ವೀರಶೈವ ಲಿಂಗಾಯತ ವಿಭಜನೆಯ ನಾಟಕ ಎಂದು ಲೇವಡಿ ಮಾಡಿದ್ರು.
ನಾನೊಬ್ಬ ಕನ್ನಡಿಗ, ನಾನು ನಾಡಿನ ಸಾಂಸ್ಕೃತಿಕ ಧ್ವಜವನ್ನು ಹಿಡಿದುಕೊಂಡು ಕುಣಿದಿದ್ದೇನೆ. ರಾಜ್ಯ ಸರ್ಕಾರದ ಜವಾಬ್ದಾರಿಯುತ ಸಚಿವನಾಗಿ ಸಂವಿಧಾನದಡಿ ಕಾರ್ಯ ನಿರ್ವಹಿಸುವಾಗ ಕನ್ನಡ ರಾಜ್ಯೋತ್ಸವ ದಿನ ರಾಷ್ಟ್ರಧ್ವಜ ಹಾರಿಸಿದ್ದೇನೆ. ನನ್ನ ಹಿಂದಿನವರೂ ರಾಷ್ಟಧ್ವಜ ಹಾರಿಸಿದ್ದರು. ನಾನು ಅದನ್ನೇ ಮಾಡಿದ್ದೇನೆ. ಸಂವಿಧಾನ ಒಂದೇ ಬಾವುಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡಿದ್ದಾನೆ ಎಂದು ಸ್ಪಷ್ಟನೆ ಕೊಟ್ಟರು.