ETV Bharat / state

ಮುಂಗಾರು ಪೂರ್ವ ಮಳೆಗೆ ಬೆಳೆಗಳ ಹಾನಿ.. ಅನ್ನದಾತರು ಕಂಗಾಲು

ಅಕಾಲಿಕ ಮಳೆಗೆ ಪಪ್ಪಾಯಿ,ದಾಳಿಂಬೆ,ಈರುಳ್ಳಿ,ಟೊಮ್ಯಾಟೊ ಸೇರಿದಂತೆ ಇತರೆ ಬೆಳೆಗಳು ನೆಲಕ್ಕುರುಳಿವೆ.

Crop damage to premature rain in raichur
ಅಕಾಲಿಕ ಮಳೆಗೆ ಬೆಳೆ ಹಾನಿ..ಅನ್ನದಾತ ಕಂಗಾಲು
author img

By

Published : Apr 8, 2020, 7:18 PM IST

ರಾಯಚೂರು : ಜಿಲ್ಲೆಯ ಲಿಂಗಸುಗೂರ ತಾಲೂಕಿನಲ್ಲಿ ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳವಾರ ಸಂಜೆ ಭಾರಿ ಬಿರುಗಾಳಿ,ಆಲೆಕಲ್ಲು ಸಹಿತ ಮಳೆ ಸುರಿದಿದ್ದರಿಂದ ಪಪ್ಪಾಯಿ,ದಾಳಿಂಬೆ,ಈರುಳ್ಳಿ ಹಾಗೂ ಟೊಮ್ಯಾಟೊ ಸೇರಿ ಇತರೆ ಬೆಳೆಗಳು ನೆಲಕ್ಕುರುಳಿವೆ.

ತಾಲೂಕಿನ ಆನ್ವರಿ, ಗೌಡೂರು, ಗೌಡೂರತಾಂಡಾ, ಗೋನವಾಟ್ಲ, ಕರಡಕಲ್ಲ ತಾಂಡಾ ಸೇರಿ ಕೆಲವೆಡೆ ಕಟಾವು ಹಂತದಲ್ಲಿದ್ದ ಪಪ್ಪಾಯಿ, ದಾಳಿಂಬೆ ಭಾಗಶಃ ಹಾನಿಗೀಡಾಗಿವೆ. ಇದರಿಂದ ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಂಡ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ತವದಗಡ್ಡಿ, ಛತ್ತರ, ನಾಗಲಾಪುರ ಮತ್ತಿತರೆಡೆ ಈರುಳ್ಳಿ, ಟೊಮ್ಯಾಟೊ ಸೇರಿದಂತೆ ಇತರೆ ಬೆಳೆಗಳು ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದೆ. ಈ ಕುರಿತು ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ,ಸಮೀಕ್ಷೆ ನಡೆಸಬೇಕು ಎಂದು ರೈತ ಸಂಘದ ಮುಖಂಡ ಸಿದ್ದೇಶ ಗೌಡೂರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.