ರಾಯಚೂರು: ತುಂಗಾ ತೀರದಲ್ಲಿ ನೆಲೆಸಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿಯ ಪೀಠ ಅಲಂಕರಿಸಿದ್ದ ದಿನದ ನಿಮಿತ್ತ ಗುರು ವೈಭವೋತ್ಸವ ವರ್ಧಂತೋತ್ಸವವು ಮಂತ್ರಾಲಯದ ಮಠದಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ.
ಶ್ರೀಗುರು ರಾಯರು ಗುರುರಾಜರಿಂದ ಪೀಠ ಅಲಂಕರಿಸಿ ಇಂದಿಗೆ 399ನೇ ವರ್ಷ ಹಾಗೂ ಮಾರ್ಚ್ 2ರಂದು ಅವರ 425ನೇ ವರ್ಧಂತೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಮಠದಲ್ಲಿ ಏಳು ದಿನಗಳ ಸಪ್ತ ಗುರು ವೈಭವೋತ್ಸವ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಏಳು ದಿನಗಳ ಕಾಲ ಮೂಲ ರಾಮದೇವರಿಗೆ ಅಭಿಷೇಕ, ರಾಯರ ಪಾದುಕೆಗಳಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ.