ರಾಯಚೂರು: ಜಿಲ್ಲೆಯ ಕೊರೊನಾ ಶಂಕಿತರ ರಕ್ತ ಮತ್ತು ಗಂಟಲು ದ್ರವದ ಮಾದರಿಯ ಟೆಸ್ಟ್ ವರದಿ ಬಂದಿದೆ. ಇದರಲ್ಲಿ 91 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನೂ 367 ಜನರ ವರದಿಗಾಗಿ ಕಾಯಲಾಗುತ್ತಿದೆ.
ಜಿಲ್ಲೆಯಿಂದ ಇದುವರೆಗೂ ಒಟ್ಟು 787 ಜನರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದರಲ್ಲಿ 415 ಜನರ ವರದಿ ನೆಗೆಟಿವ್ ಬಂದಿದೆ. ನಗರದ ಒಪೆಕ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ 45 ಜನರಿಗೆ ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದ ಕಾರಣ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೂ 37 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಹೊರ ದೇಶಕ್ಕೆ ಹೋಗಿ ಬಂದ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ್ದ 760 ಜನರ ಗೃಹ ದಿಗ್ಬಂಧನ ಅವಧಿ ಪೂರ್ಣಗೊಂಡಿದೆ. ಹೊರ ರಾಜ್ಯದಿಂದ ಬಂದಿರುವ 290 ಜನರನ್ನು ಸರ್ಕಾರಿ ಕಟ್ಟಡದಲ್ಲಿ ಕ್ವಾರಂಟೈನ್ನಲ್ಲಿರಿಸಲಾಗಿದೆ. 478 ಜನರ ಕ್ವಾರಂಟೈನ್ ಅವಧಿ ಪೂರ್ಣಗೊಂಡ ಹಿನ್ನೆಲೆ ಮನೆಗೆ ಕಳುಹಿಸಿ ನಿಗಾ ವಹಿಸಲಾಗಿದೆ.