ರಾಯಚೂರು: ಜಿಲ್ಲೆಯಲ್ಲಿಂದು 42 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 9,463ಕ್ಕೆ ಏರಿಕೆಯಾಗಿದೆ.
ರಾಯಚೂರು 16, ಮಾನವಿ 1, ಲಿಂಗಸೂಗೂರು 4, ಸಿಂಧನೂರು 19 ಹಾಗೂ ದೇವದುರ್ಗದ ಇಬ್ಬರಿಗೆ ಸೋಂಕು ತಗುಲಿದೆ. ಇಂದು ಮೂವರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಈವರೆಗೆ ಪತ್ತೆಯಾದ ಒಟ್ಟು 9,463 ಸೋಂಕಿತರ ಪೈಕಿ 7,819 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ, 1,520 ಸಕ್ರಿಯ ಪ್ರಕರಣಗಳಿವೆ.
ರೋಗದ ಗುಣಲಕ್ಷಣದ ಆಧಾರದ ಮೇಲೆ ಸೋಂಕಿತರನ್ನ ಕ್ವಾರಂಟೈನ್ ಕೇಂದ್ರ ಹಾಗೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.