ರಾಯಚೂರು: ಜಿಲ್ಲೆಯಲ್ಲಿಂದು 115 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,705ಕ್ಕೆ ಏರಿಕೆಯಾಗಿದೆ.
ರಾಯಚೂರು ತಾಲೂಕಿನಲ್ಲಿ -71, ಮಾನವಿ- 25, ಲಿಂಗಸೂಗೂರು -14, ಸಿಂಧನೂರಿನಲ್ಲಿ -7 ಮಂದಿಗೆ ಸೋಂಕು ತಗುಲಿದೆ. ಇಂದು ಓರ್ವ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 1,765 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 915 ಸಕ್ರಿಯ ಪ್ರಕರಣಗಳಿವೆ.