ETV Bharat / state

ಬಂಗಾರ ಉತ್ಪಾದನೆಗೂ ಅಡ್ಡಿ ಉಂಟು ಮಾಡಿದ ಮಹಾಮಾರಿ ಕೊರೊನಾ!

author img

By

Published : Oct 12, 2020, 7:35 PM IST

ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ಸೋಂಕು ಎಲ್ಲ ಕ್ಷೇತ್ರಗಳ ಆರ್ಥಿಕತೆ ಕುಗ್ಗುವಂತೆ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ದೇಶದ ಏಕೈಕ ಚಿನ್ನದ ನಿಕ್ಷೇಪವಿರುವಂತಹ ಹಟ್ಟಿ ಚಿನ್ನದ ಗಣಿಯ ಮೇಲೆ ಕೊರೊನಾ ಸೋಂಕಿನ ಕಾರ್ಮೋಡ ಕವಿಯುವ ಮೂಲಕ ಚಿನ್ನದ ಉತ್ಪಾದನೆಯಲ್ಲಿ ಕುಸಿತಗೊಂಡಿದೆ.

corona effect on gold production
corona effect on gold production

ರಾಯಚೂರು: ಕೊರೊನಾ ಸೋಂಕು ಇಡೀ ದೇಶವನ್ನೇ ನಲುಗುವಂತೆ ಮಾಡಿ, ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಿಂದ ಚಿನ್ನದ ಗಣಿ ಉತ್ಪಾದನೆಗೆ ಹಿನ್ನಡೆ ಉಂಟಾಗಿದೆ.

ಹಟ್ಟಿ ಚಿನ್ನದ ಗಣಿ 2020 - 2021ನೇ ಏಪ್ರಿಲ್​ನಿಂದ ಸೆಪ್ಟೆಂಬರ್ ತಿಂಗಳವರೆಗೆ ಒಟ್ಟು 3,45,100 ಮೆಟ್ರಿಕ್ ಟನ್ ಅದಿರು ತೆಗೆದು, 855.70 ಕೆ.ಜಿ. ಚಿನ್ನದ ಉತ್ಪಾದನೆ ಮಾಡುವ ಗುರಿಯನ್ನ ಹೊಂದಿತ್ತು. ಆದ್ರೆ ಕೊರೊನಾ ಸೋಂಕಿನ ಭೀತಿಯಿಂದಾಗಿ 2,06,755 ಮೆಟ್ರಿಕ್ ಟನ್ ಅದಿರು ತೆಗೆದು 538.68 ಕೆ.ಜಿ. ಚಿನ್ನದ ಉತ್ಪಾದನೆ ಮಾಡಲಾಗಿದ್ದು, 317.01 ಕೆ.ಜಿ. ಚಿನ್ನದ ಉತ್ಪಾದನೆಗೆ ಹಿನ್ನಡೆಯಾಗಿದೆ.

ಕೊರೊನಾದಿಂದ ಬಂಗಾರ ಉತ್ಪಾದನೆಗೂ ಅಡ್ಡಿ

2020 ಏಪ್ರಿಲ್ ತಿಂಗಳಲ್ಲಿ 58,870 ಮೆಟ್ರಿಕ್ ಟನ್ ಅದಿರು ತೆಗೆದು, 142.46 ಕೆ.ಜಿ. ಉತ್ಪಾದನೆಯ ಗುರಿ ಹೊಂದಿತ್ತು. ಆದ್ರೆ ಏಪ್ರಿಲ್ ತಿಂಗಳಲ್ಲಿ ಕೊರೊನಾ ಸೋಂಕಿನ ಭೀತಿಯಿಂದಾಗಿ ಚಿನ್ನ ಉತ್ಪಾದನೆಯನ್ನ ನಿಲ್ಲಿಸಲಾಯಿತು. ಇದಾದ ಬಳಿಕ ಜೂನ್ ತಿಂಗಳಲ್ಲಿ ಸೋಂಕಿನ ಭೀತಿ ನಡುವೆ ನಿಗದಿ ಕಾರ್ಮಿಕರೊಂದಿಗೆ ಚಿನ್ನದ ಉತ್ಪಾದನೆಯನ್ನ ಪುನಾರಂಭಿಸಲಾಯಿತು

ಜೂನ್​ನಲ್ಲಿ 46,690 ಮೆಟ್ರಿಕ್ ಟನ್ ಅದಿರು ತೆಗೆದು, 114.391 ಕೆ.ಜಿ. ಚಿನ್ನದ ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಆದ್ರೆ 76.77 ಕೆ.ಜಿ.ಯಷ್ಟು ಚಿನ್ನವನ್ನ ತೆಗೆಯಲಾಯಿತು. ಜೂನ್​ನಲ್ಲಿ 58,870 ಮೆಟ್ರಿಕ್ ಟನ್ ಅದಿರು ತೆಗೆದು, 147.17 ಕೆ.ಜಿ. ಗುರಿಯಲ್ಲಿ 139.50 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ.

ಜುಲೈನಲ್ಲಿ 60,900 ಅದಿರು ಸಂಗ್ರಹಿಸಿ, 152.25 ಕೆ.ಜಿ. ಬಂಗಾರ ಉತ್ಪಾದಿಸುವ ಗುರಿಯಲ್ಲಿ 53,503 ಮೆಟ್ರಿಕ್ ಟನ್ ಅದಿರನ್ನ ಸಂಗ್ರಹಿಸಿ 127.48 ಕೆ.ಜಿ. ಬಂಗಾರವನ್ನ ತೆಗೆಯಲಾಗಿದೆ.

ಆಗಸ್ಟ್​ನಲ್ಲಿ 60,900 ಮೆಟ್ರಿಕ್ ಟನ್ ಅದಿರು ತೆಗೆದು 152.52 ಕೆ.ಜಿ.ಯಷ್ಟು ಅಪರಂಜಿ ತೆಗೆಯುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ 36,087 ಮೆಟ್ರಿಕ್ ಟನ್ ತೆಗೆದು, 60.83 ಕೆ.ಜಿ. ಬಂಗಾರವನ್ನ ಉತ್ಪಾದಿಸಲಾಗಿದೆ.

ಅಕ್ಟೋಬರ್​ನಲ್ಲಿ 58,870 ಮೆಟ್ರಿಕ್ ಟನ್ ಅದಿರು ಸಂಗ್ರಹಿಸಿ 147.17 ಬಂಗಾರ ತೆಗೆಯುವ ಗುರಿಯಲ್ಲಿ, 42,692 ಮೆಟ್ರಿಕ್ ಟನ್ ಅದಿರು ತೆಗೆದು 10.35 ಕೆ.ಜಿ.ಯಷ್ಟು ಬಂಗಾರವನ್ನ ಉತ್ಪಾದಿಸಲಾಗಿದೆ.

ಕೊರೊನಾ ಸೋಂಕು ಜಿಲ್ಲೆಯಲ್ಲಿ ಆರಂಭದ ದಿನಗಳಲ್ಲಿ ಕಾಣಿಸಿಕೊಂಡಿರಲ್ಲ. ಆದ್ರೆ ವಲಸೆ ಹೋಗಿದ್ದ ಕಾರ್ಮಿಕರು ಮರಳಿ ಬಂದ ಬಳಿಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದರಿಂದ ಜಿಲ್ಲೆಯಲ್ಲಿ ದಿನ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತೇಲೆ ಸಾಗಿತ್ತು. ಆಗ ಚಿನ್ನದ ಗಣಿಯಲ್ಲಿ ಕೆಲಸ ಮಾಡುವಂತಹ ಕೆಲ ಕಾರ್ಮಿಕರಿಗೂ ಕೊರೊನಾ ಸೋಂಕು ಹರಡಿತ್ತು.

ಕೊರೊನಾ ಸೋಂಕು ದೇಶದ ಆರ್ಥಿಕತೆಗೆ ಸಂಕಷ್ಟದ ತಂದೋಡ್ಡಿದ್ದಲ್ಲದೇ, ಚಿನ್ನ ಉತ್ಪಾದನೆಯ ನಿಗದಿತ ಗುರಿಯನ್ನ ತಲುಪುವುದಕ್ಕೂ ಅಡ್ಡಿ ಉಂಟು ಮಾಡಿದೆ. ಕೊರೊನಾ ಸೋಂಕಿನ ಭೀತಿಯಿಂದ ತಿಂಗಳ ಕಾಲ ಚಿನ್ನದ ಗಣಿಯನ್ನ ಬಂದ್ ಮಾಡಿ, ಬಳಿಕ ನಿಗದಿ ಗುರಿಯಂತೆ 855.70 ಕೆ.ಜಿ.ಯಷ್ಟು ಉತ್ಪಾದನೆ ಸಾಧ್ಯವಾಗದಿದ್ದರೂ, 538.68 ಕೆ.ಜಿ.ಯಷ್ಟು ಚಿನ್ನ ಉತ್ಪಾದನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.