ರಾಯಚೂರು: ಬಾಗಲಕೋಟೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮಕ್ಕಳಿಗೂ ಲಿಂಗಸುಗೂರಿನಲ್ಲಿ ಇರುವ ಇಬ್ಬರಿಗೂ ಆತ್ಮೀಯ ಸ್ನೇಹವಿದೆ ಎಂಬ ಸುದ್ದಿ ತಿಳಿದ ಹಿನ್ನೆಲೆ ಆ ಇಬ್ಬರನ್ನು ರಿಮ್ಸ್ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿದೆ.
ಪರೀಕ್ಷೆ ವರದಿ ಬರುವವರೆಗೂ ನೀವು ಮನೆಯಿಂದ ಹೊರಗೆ ಬರಬೇಡಿ. ನಿಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ತಾಲೂಕು ಆಡಳಿತ ನೀಡುತ್ತದೆ ಎಂದು ಡಿವೈಎಸ್ಪಿ ಎಸ್.ಎಸ್.ಹುಲ್ಲೂರು ಮನವಿ ಮಾಡಿದರು. ಅಲ್ಲದೇ ವರದಿಯಲ್ಲಿ ನೆಗೆಟಿವ್ ಬಂದ ನಂತರ ನೀವು ಹೊರಗೆ ಬರುವಿರಂತೆ. ಅಲ್ಲಿಯವರೆಗೂ ದಯವಿಟ್ಟು ಮನೆಯಲ್ಲಿ ಇರಿ ಎಂದು ಹೇಳಿದರು. ಈ ಮಾತನ್ನು ಮೀರಿ ಯಾರಾದರೂ ಹೊರಗೆ ಬಂದರೆ ಕೇಸ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ವೃದ್ಧ ಮೃತಪಟ್ಟ ನಂತರ ಆತನ ಮಕ್ಕಳ ಜೊತೆ ಇವರು ಸಂಪರ್ಕ ಹೊಂದಿದ್ದ ಬಗ್ಗೆ ಖಚಿತ ಮಾಹಿತಿ ಇಲ್ಲದೇ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿಗಾಗಿ ಕಾಯಲಾಗುತ್ತಿದೆ.