ರಾಯಚೂರು: ತುಂಗಭದ್ರಾ ನದಿಯ ರಾಜಲಬಂಡಾ ಡ್ಯಾಂ ಭರ್ತಿಯಾದ ಹಿನ್ನಲೆ ವಿಧಾನ ಪರಿಷತ್ ಸದಸ್ಯ ಎನ್. ಎಸ್. ಬೋಸರಾಜ್ ಹಾಗೂ ಕೈ ನಾಯಕರು, ಕಾರ್ಯಕರ್ತರು ಬಾಗಿನ ಅರ್ಪಿಸಿದ್ರು.
ಮಾನವಿ ತಾಲೂಕಿನ ರಾಜಲಬಂಡಾ ಗ್ರಾಮದ ಬಳಿ ಬರುವ ಈ ಡ್ಯಾಂ ಭರ್ತಿಯಾಗಿ ನೀರು ಉಕ್ಕಿ ಹರಿಯುತ್ತಿದೆ. ಹೀಗಾಗಿ ಡ್ಯಾಂಗೆ ಬಾಗಿನ ಅರ್ಪಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ತುಂಗಭದ್ರಾ ಎಡದಂತೆ ಕಾಲುವೆಯ ಗೇಟ್ ಎತ್ತುವ ಮೂಲಕ ನೀರು ಹರಿದು ಬಿಡಲಾಯಿತು.
ಈ ವೇಳೆ ರಾಯಚೂರು ಗ್ರಾಮೀಣ ಶಾಸಕರಾದ ಬಸವನಗೌಡ ದದ್ದಲ್, ಬಸವರಾಜ್ ಪಾಟೀಲ್ ಇಟಗಿ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಸೇರಿದಂತೆ ಹಲವು ಕೈ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.