ರಾಯಚೂರು: ಮಸ್ಕಿ ಉಪಚುನಾವಣೆ ಹಿನ್ನೆಲೆ ಇಂದು ಮತ್ತು ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಮತಬೇಟೆ ನಡೆಸಲಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೂ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಸ್ಕಿ ವಿಧಾನಸಭಾ ಕ್ಷೇತ್ರದ 3 ಜಿ.ಪಂ ವ್ಯಾಪ್ತಿಯಲ್ಲಿ ಭರ್ಜರಿ ಮತ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ ತುರುವಿಹಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ತಿಡಿಗೋಳ, ಗುಂಡಾ, ಉಮಲೂಟಿ, ಕಲಮಂಗಿ, ಬಪ್ಪೂರು, ವಿರುಪಾಪುರ, ಗುಂಜಳ್ಳಿ ಹಾಗೂ ತುರುವಿಹಾಳ ಗ್ರಾಮಗಳಲ್ಲಿ ಮತಬೇಟೆ ನಡೆಸಲಿದ್ದಾರೆ.
ಮಧ್ಯಾಹ್ನ ಬಳಗಾನೂರ ಜಿ.ಪಂ.ವ್ಯಾಪ್ತಿಯ ಹಾಲಾಪುರ, ವಟಗಲ್, ಗುಡದೂರು, ಕೋಳದಾಳ, ಗೌಡನಬಾವಿ, ಹಿರೇದಿನ್ನಿ, ಅಮೀನಗಡ, ಉದ್ಭಾಳ, ಮಲ್ಲದಗುಡ್ಡ ಹಾಗೂ ತೋರಣದಿನ್ನಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ, ಸಂಜೆ ಸಂತೆಕೆಲ್ಲೂರು ಜಿ.ಪಂ. ವ್ಯಾಪ್ತಿಯ ಮಟ್ಟರೂ, ಸರ್ಜಾಪುರ, ಅಂಕುಶದೊಡ್ಡಿ, ಮಾರಲದಿನ್ನಿ, ಮೆದಿಕಿನಾಳ, ಅಡವಿಭಾವಿ, ಕನ್ನಾಳ, ತಲೇಖಾನ್, ಪಾಮನಕೆಲ್ಲೂರು ಮತ್ತು ಸಂತೆಕೆಲ್ಲೂರು ಗ್ರಾಮದಲ್ಲಿ ಸಿಎಂ ಪ್ರಚಾರ ಕೈಗೊಳ್ಳಲಿದ್ದಾರೆ.
ಸಂಜೆ 7 ಗಂಟೆಗೆ ಮುದಗಲ್ ಪಟ್ಟಣದಲ್ಲಿ ಸಿಎಂ ಜೊತೆ ಪ್ರಮುಖ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ.