ETV Bharat / state

ರಾಜ್ಯದಿಂದ ಆಯ್ಕೆಯಾದ 26 ಮಂಗಳಮುಖಿಯರಿಂದ ಮೋದಿ ಜಪ ಮಾತ್ರ : ಸಿ ಎಂ ಇಬ್ರಾಹಿಂ ವ್ಯಂಗ್ಯ - ಕೇಂದ್ರದಲ್ಲಿ ರಾಜ್ಯದ ಬಗ್ಗೆ ಉಗಿದು ನೋಡುವರಿಲ್ಲ

ರಾಜ್ಯಕ್ಕೆ 30 ಸಾವಿರ ಕೋಟಿ ರೂಪಾಯಿ ಬರಬೇಕು, ಅದನ್ನ ತರುವ ಶಕ್ತಿಯಿಲ್ಲ ಇವರಿಗಿಲ್ಲ. ಬದಲಾಗಿ ಕೇಂದ್ರ ಹೆಚ್​​ಎಎಲ್, ಬಿಪಿಎಲ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳನ್ನ ಮಾರಾಟ ಮಾಡಲು ಹೊರಟಿದ್ದಾರೆ. ಇದನ್ನ ಸರ್ಕಾರ ಅನ್ನಬೇಕಾ ಎಂದು ಕೇಂದ್ರ ವಿರುದ್ಧ ಹರಿಹಾಯ್ದರು..

cm-ibrahim-talk-about-state-parliment-members-issue
ಸಿ.ಎಂ.ಇಬ್ರಾಹಿಂ ಟಾಂಗ್
author img

By

Published : Jan 30, 2021, 9:33 PM IST

Updated : Jan 30, 2021, 10:08 PM IST

ರಾಯಚೂರು : ರಾಜ್ಯದಿಂದ 26 ಮಂಗಳಮುಖಿಯರನ್ನ ಆಯ್ಕೆ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಅವರು ಮೋದಿ ಮೋದಿ ಎಂದು ಜಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಪರೋಕ್ಷವಾಗಿ ಸಂಸದರಿಗೆ ಕುಟಕಿದರು.

ಸಿ.ಎಂ.ಇಬ್ರಾಹಿಂ ಟಾಂಗ್

ಓದಿ: ಕಾಳಹಸ್ತಿಯ ದೇವಾಲಯ ಚೇರ್ಮನ್ ಹುದ್ದೆ ಕೊಡಿಸುವುದಾಗಿ 1.5 ಕೋಟಿ ವಂಚಿಸಿದ್ದನಂತೆ 'ಯುವರಾಜ'!

ಕೇಂದ್ರದಲ್ಲಿ ರಾಜ್ಯದ ಬಗ್ಗೆ ಉಗಿದು ನೋಡುವವರಿಲ್ಲ. ರಾಜ್ಯದ 26 ಜನ ಆಯ್ಕೆ ಮಾಡಿ ಕಳುಹಿಸಲಾಗಿದ್ದು, ಕೇವಲ ಮೋದಿ ಜಪ ಮಾಡುತ್ತಾ ಕುಳಿತಿದ್ದಾರೆ. ಆಯ್ಕೆಯಾದ 26 ಜನರು ಕೇಂದ್ರದಿಂದ ರಾಜ್ಯಕ್ಕೆ ಒಂದು ರೂಪಾಯಿ ಅನುದಾನ ತರುವ ಶಕ್ತಿಯಿಲ್ಲ.

ರಾಜ್ಯಕ್ಕೆ 30 ಸಾವಿರ ಕೋಟಿ ರೂಪಾಯಿ ಬರಬೇಕು, ಅದನ್ನ ತರುವ ಶಕ್ತಿಯಿಲ್ಲ ಇವರಿಗಿಲ್ಲ. ಬದಲಾಗಿ ಕೇಂದ್ರ ಹೆಚ್​​ಎಎಲ್, ಬಿಪಿಎಲ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳನ್ನ ಮಾರಾಟ ಮಾಡಲು ಹೊರಟಿದ್ದಾರೆ. ಇದನ್ನ ಸರ್ಕಾರ ಅನ್ನಬೇಕಾ ಎಂದು ಕೇಂದ್ರ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ ಅಸಾದುದ್ದೀನ್ ಒವೈಸಿ, ಎಂಐಎಂ ಮಾಡಿಕೊಂಡು ಕರ್ನಾಟಕದಲ್ಲಿ ಶಾಖೆ ಪ್ರಾರಂಭಿಸಲು ಹೊರಟಿದ್ದಾರೆ. ಆದರೆ, ಇದು ರಾಜ್ಯದ ಹಿತಾಸಕ್ತಿಗೆ ಒಳ್ಳೆಯ ಬೆಳವಣಿಗೆಯಲ್ಲ. ಮುಸ್ಲಿಂ ಸಮುದಾಯದಲ್ಲಿ ಗೊಂದಲವಿದೆ. ಅದನ್ನ ಸರಿಪಡಿಸುವ ಮೂಲಕ ಇತರೆ ಸಮಾಜಗಳ ಜತೆ ನಾಡಿನ ಸಂಸ್ಕೃತಿಯೊಂದಿಗೆ ಕೊಂಡ್ಯುಯುವಂತೆ ಮಾಡಲಾಗುವುದು ಎಂದರು.

ನಾನು ಸದ್ಯ ಕಾಂಗ್ರೆಸ್‌ನಲ್ಲಿ ಇದ್ದೇನೆ. ಆದರೆ, ಇಲ್ಲಿಯೂ ಅಸಮಾಧಾನವಿದೆ. ಕಾಂಗ್ರೆಸ್‌ನಲ್ಲಿ ನಿರೀಕ್ಷೆತೆಯಂತೆ ನ್ಯಾಯ ಸಿಗಬೇಕು. ಆದರೆ, ನಿರೀಕ್ಷೆಗೆ ತಕ್ಕಂತೆ ನ್ಯಾಯ ಸಿಕ್ಕಿಲ್ಲ. ಕಾಂಗ್ರೆಸ್‌ನಲ್ಲಿಯೂ ಅಸಮಾಧಾನವಿದೆ ಎಂದು ಬೇಸರ ವ್ಯಕ್ತಪಡಿಸಿದರು, ಮುಂದಿನ ರಾಜಕೀಯ ನಡೆಯ ಬಗ್ಗೆ ಮಾರ್ಚ್ 15ರಂದು ನಿರ್ಧರಿಸುವುದಾಗಿ ತಿಳಿಸಿದರು.

ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಯ ಕಳೆದು ಹೋಗಿದ್ದು, ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಸಫಲಗಿಂತ ಹೆಚ್ಚಾಗಿ ವಿಫಲವಾಗಿದೆ. ಖಾತೆ ಹಂಚಿಕೆ ಹಾಗೂ ಕ್ಯಾಬಿನೆಟ್ ರಚನೆ ಮಾಡುವುದರಲ್ಲಿ ಸಮಯ ಕಳೆದು ಹೋಗಿದ್ದು, ಬಿಎಸ್‌ವೈಯವರಿಗೆ ಸಮಾಧಾನವಿಲ್ಲ. ನಾನು ಈ ಹಿಂದೆ ಹೇಳಿದಂತೆ ಡಿಸೆಂಬರ್ ತಿಂಗಳಲ್ಲಿ ರಾಜಕೀಯ ಕೋಲಾಹಲ ಉಂಟಾಗುತ್ತದೆ ಎಂದು ನುಡಿದಿದ್ದು, ಸತ್ಯವಾಗಿದೆ ಎಂದರು.

Last Updated : Jan 30, 2021, 10:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.