ETV Bharat / state

ನಾವು ಕೆಲಸ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇವೆ: ಸಿಎಂ ಇಬ್ರಾಹಿಂ - cm ibrahim slams bjp

ನಾವು ಕೆಲಸ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಜನತೆಗೆ ವಾಗ್ದಾನ ಮಾಡುತ್ತಿದ್ದೇವೆ. ಯಾವುದೇ ರಾಜಕೀಯ ಪಕ್ಷ ಇದುವರೆಗೂ ಈ ರೀತಿಯ ವಾಗ್ದಾನ ಮಾಡಿಲ್ಲ. ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗಿಂತ ವಿಭಿನ್ನವಾಗಿ ಜೆಡಿಎಸ್ ಪಕ್ಷ ಮುಂದೆ ಹೋಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

cm ibrahim
ಸಿಎಂ ಇಬ್ರಾಹಿಂ
author img

By

Published : Sep 30, 2022, 1:09 PM IST

ರಾಯಚೂರು: ಕಾಂಗ್ರೆಸ್, ಬಿಜೆಪಿ ಮಧ್ಯೆ ಪೈಪೋಟಿ ನಡೆಯುತ್ತಿದೆ. ಈ ಎರಡು ಪಕ್ಷಗಳಿಗಿಂತ ವಿಭಿನ್ನವಾಗಿ ಜೆಡಿಎಸ್ ಪಕ್ಷ ಮುಂದೆ ಹೋಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚ ರತ್ನ ಯೋಜನೆ ಜಾರಿಗೆ ತರುತ್ತೇವೆ. ಈ ಯೋಜನೆಯನ್ನ ರಾಜ್ಯದ ಜನರ ಮುಂದೆ ಇಟ್ಟಿದ್ದು, ಪ್ರವಾಸ ಮಾಡುತ್ತೇವೆ. ಭಯ ಮುಕ್ತ, ಹಸಿವು ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ಹೊಂದಿದ್ದೇವೆ. ನಾವು ಕೆಲಸ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಜನತೆಗೆ ವಾಗ್ದಾನ ಮಾಡುತ್ತಿದ್ದೇವೆ. ಯಾವುದೇ ರಾಜಕೀಯ ಪಕ್ಷ ಇದುವರೆಗೂ ಈ ರೀತಿಯ ವಾಗ್ದಾನ ಮಾಡಿಲ್ಲ. ಜೊತೆಗೆ ರಾಜ್ಯದ ರೈತರ ಹಿತದೃಷ್ಟಿಯಿಂದ ನೆನೆಗುದಿಗೆ ಬಿದ್ದಿರುವ ಹಾಗೂ ಜಾರಿಯಲ್ಲಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ

ಇದನ್ನೂ ಓದಿ: ಅವರದ್ದು ಖಡಕ್ ಸರ್ಕಾರ, ಇವರದ್ದು ಬೈಠಕ್ ಸರ್ಕಾರ: ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಿಎಂ ಇಬ್ರಾಹಿಂ ಟೀಕೆ

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮಗೆ ಯಾವುದೇ ಹೈಕಮಾಂಡ್ ಇಲ್ಲ, ತಮಾಷೆ ತೋರಿಸೋದು ನಮ್ಮಲ್ಲಿ ಇಲ್ಲ. ಭಾರತ್ ಜೋಡೋ ಅಲ್ಲ ಮೊದಲು ಕಾಂಗ್ರೆಸ್ ಜೋಡೋ ಕೆಲಸ ಮಾಡಲಿ. ಇನ್ನೂ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡುವುದಕ್ಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: 'ರಾಜ್ಯದಲ್ಲಿ ಜೆಡಿಎಸ್ ನಂಬರ್ 1 ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ'

ನಮ್ಮದು ಬಿ-ಟೀಂ ಅಂತಿದ್ರು. ಈಗ ಅವರೇ ಬಿ-ಟೀಂ ಆಗಿದ್ದಾರೆ. ಇವರೇ 12 ಜನ ಎಂಎಲ್ಎ ಗಳನ್ನ ಕಳುಹಿಸಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಯಾರು ಬಿಜೆಪಿಗೆ ಸಪೋರ್ಟ್ ಮಾಡಿದರು ಎನ್ನುವುದನ್ನು ರಾಹುಲ್ ಗಾಂಧಿಯವರೇ ಹೇಳಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.