ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆ ಪ್ರಚಾರ ಅಖಾಡಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧುಮ್ಮುಕಿದ್ದಾರೆ.
ಜಿಲ್ಲೆಯ ಮಸ್ಕಿ ಪಟ್ಟಣದ ಅಂಬೇಡ್ಕರ್ ನಗರದ ದಲಿತರ ಮನೆಯಲ್ಲಿ ಉಪಹಾರ ಸೇವಿಸುವ ಮೂಲಕ ದಲಿತರ ಮತ ಸೆಳೆಯುವುದಕ್ಕೆ ಮುಂದಾದರು. ಖಾಸಿಂ ಮುರಾರಿ ಎನ್ನುವವರ ಮನೆಯಲ್ಲಿ ಮಾಡಿದ ಉಪ್ಪಿಟ್ಟು, ಶಿರಾ, ಮಂಡಾಳ ಚೂಡಾ, ಅವಲಕ್ಕಿ ಉಪಹಾರ ಸವಿದ ಅವರು, ನಂತರ ಖಾಸಿಂ ಮುರಾರಿ ಕುಟುಂಬಸ್ಥರೊಂದಿಗೆ ಚರ್ಚೆ ಮಾಡಿ ಕುಶಲೋಪರಿ ವಿಚಾರಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಲಾಗದವರು ಮೈ ಪರಚಿಕೊಂಡವರಂತೆ ಬಿಜೆಪಿ ಬಗ್ಗೆ ಮಾತನಾಡುತ್ತಾರೆ ಎಂದರು. ಈ ಮೂಲಕ ಉಪಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಯಿಂದ ಹಣ ಹಂಚಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು. ಕಾಂಗ್ರೆಸ್ನವರು ಅದೇನೇ ಮಾಡಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ 25,000 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದರು.
![cm-bsy-entry-into-the-by-election-campaign-in-maski](https://etvbharatimages.akamaized.net/etvbharat/prod-images/kn-rcr-04-cm-vist-vis-ka10035_09042021175131_0904f_1617970891_653.jpg)
ಎನ್‌ಆರ್‌ಬಿಸಿ 5A ಉಪ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಜ್ಞರ ಸಭೆ ಕರೆದು ಚರ್ಚೆಸುತ್ತೇನೆ. ಕಾಲುವೆ ಸಾಧಕ-ಬಾಧಕಗಳ ಬಗ್ಗೆ ತಜ್ಞರ ಜತೆಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಉಪ ಕಾಲುವೆ ನಿರ್ಮಾಣದ ಬಗ್ಗೆ ಆತುರದಲ್ಲಿ ಭರವಸೆ ನೀಡುವುದಕ್ಕೆ ಆಗುವುದಿಲ್ಲ. ದಲಿತ ವ್ಯಕ್ತಿಯ ಮನೆಗೆ ಭೇಟಿ ನೀಡೋದು ಕಾಮನ್. ಹೀಗಾಗಿ ಇವತ್ತೂ ಸಹ ದಲಿತ ಸಮುದಾಯದ ವ್ಯಕ್ತಿ ಮನೆಗೆ ಬಂದು ಉಪಹಾರ ಸೇವಿಸಿದ್ದೇನೆ ಎಂದು ತಿಳಿಸಿದರು.
![cm-bsy-entry-into-the-by-election-campaign-in-maski](https://etvbharatimages.akamaized.net/etvbharat/prod-images/kn-rcr-04-cm-vist-vis-ka10035_09042021175131_0904f_1617970891_669.jpg)
ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವಾಗಿದೆ. ರಾಜ್ಯದ 3 ಕಡೆಯ ಉಪಚುನಾವಣೆಯಲ್ಲಿ ಎಲ್ಲಾ ಕಡೆ ಒಳ್ಳೆ ವಾತಾವರಣ ಇದೆ. ಮಸ್ಕಿ ಸೇರಿದಂತೆ ಮೂರು ಕಡೆಗೂ ನೂರಕ್ಕೆ ನೂರು ಬಿಜೆಪಿ ಅಭ್ಯರ್ಥಿ ಗೆಲುತ್ತಾರೆ. ಹಿಂದುಳಿದವರು ಎಲ್ಲಾ ಸಮುದಾಯದವರು ನೂರಕ್ಕೆ ನೂರು ಬೆಂಬಲಿಸುತ್ತಾರೆ. ಸಾರಿಗೆ ನೌಕರರಿಗೆ ಬಸ್ಗಳನ್ನು ಬಿಡಲು ಹೇಳಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಕರಿಸಲು ಮನವಿ ಮಾಡಿದ್ದೇನೆ. ಸಾರಿಗೆ ನೌಕರರ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಒಂಭತ್ತು ಬೇಡಿಕೆಗಳ ಪೈಕಿ ಎಂಟು ಬೇಡಿಕೆಗಳನ್ನ ಈಡೇರಿಸಿದ್ದೇನೆ ಎಂದರು.
![cm-bsy-entry-into-the-by-election-campaign-in-maski](https://etvbharatimages.akamaized.net/etvbharat/prod-images/kn-rcr-06-byeelection-cm-prachar-script-ka10035_09042021201114_0904f_1617979274_420.jpg)
ಓದಿ: ಸಾರಿಗೆ ನಿಗಮದ ನೌಕರರು ಸರ್ಕಾರಕ್ಕೆ ಸಹಕಾರ ನೀಡಲಿ: ಅಶ್ವತ್ಥ್ ನಾರಾಯಣ್ ಮನವಿ