ರಾಯಚೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ.
ಭೀಮೇಶ್ ಯಾದವ್ (23) ಅತ್ಯಾಚಾರ ಎಸಗಿದ ಆರೋಪಿ. 15 ವರ್ಷದ ಬಾಲಕಿ ತಮ್ಮ ಅಜ್ಜಿಯ ಮನೆಯಿಂದ ಸಗಣಿ ತರಲು ಹೊರಗಡೆ ತೆರಳಿದಾಗ, ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.