ETV Bharat / state

ತುಂಗಭದ್ರಾ ಎಡದಂಡೆ ನಾಲೆಗೆ ಹಾಕಿರುವ ಅಕ್ರಮ ಪೈಪ್​​ಗಳ ತೆರವಿಗೆ ರೈತರ ಆಗ್ರಹ - ತುಂಗಭದ್ರಾ ಎಡದಂಡೆ ನಾಲೆ

ಆಗಷ್ಟ್​​ 6ರೊಳಗೆ ತುಂಗಭದ್ರಾ ಎಡದಂಡೆ ನಾಲೆಗೆ ಮೇಲ್ಭಾಗದಲ್ಲಿ ಹಾಕಿರುವ ಅಕ್ರಮ ಪೈಪ್​​ಗಳನ್ನು, ತೆರವುಗೊಳಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

Chamarasa Mali Patil news conference
ತುಂಗಭದ್ರಾ ಎಡದಂಡೆ ನಾಲೆಗೆ ಹಾಕಿರುವ ಅಕ್ರಮ ಪೈಪ್​​ಗಳ ತೆರವಿಗೆ ರೈತರ ಆಗ್ರಹ
author img

By

Published : Jul 27, 2020, 6:22 PM IST

ರಾಯಚೂರು: ತುಂಗಭದ್ರಾ ಎಡದಂಡೆ ನಾಲೆಗೆ ಮೇಲ್ಭಾಗದಲ್ಲಿ ಹಾಕಿರುವ ಅಕ್ರಮ ಪೈಪ್​​ಗಳನ್ನು ಆಗಸ್ಟ್​​ 6ರೊಳಗೆ, ಕೊಪ್ಪಳ ಹಾಗೂ ರಾಯಚೂರು ಜಿಲ್ಲಾಡಳಿತಗಳು ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ರೈತ ಹಿತ ರಕ್ಷಣಾ ಸಮಿತಿ ಸಂಚಾಲಕ ಚಾಮರಸ ಮಾಲಿ ಪಾಟೀಲ್ ಆಗ್ರಹಿಸಿದ್ದಾರೆ.

ನಗರದ ಜೆ.ಸಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಧಿಕೃತವಾಗಿ ನಾಲೆಯಿಂದ ಪೈಪ್​ಗಳನ್ನ ಅಳವಡಿಸಿ, ನೀರಾವರಿಯಲ್ಲದ ಪ್ರದೇಶದಲ್ಲಿ ನೀರಾವರಿ ಮಾಡಿಕೊಂಡಿದ್ದಾರೆ. ಇದರಿಂದ ಕೆಳಭಾಗದಲ್ಲಿ ಬರುವ ರಾಯಚೂರು, ಮಾನವಿ, ಸಿರವಾರ ತಾಲೂಕಿನ ರೈತರು ನೀರಾವರಿಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕೂಡಲೇ ಜಿಲ್ಲಾಡಳಿತ ಅಕ್ರಮ ನೀರಾವರಿಯನ್ನು ತಡೆದು, ನಾಲೆಗಳಿಗೆ ಅಳವಡಿಸಿರುವ ಪೈಪ್​ಗಳನ್ನು ತೆಗೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಅಕ್ರಮವಾಗಿ ಅಳವಡಿಸಿರುವ ಪೈಪ್​ಗಳನ್ನು ತೆರವುಗೊಳಿಸದಿದ್ದರೆ, ಸಾವಿರಾರು ರೈತರೊಟ್ಟಿಗೆ ಬಂದು ನಾವೇ ಆ ಪೈಪ್​​ಗಳನ್ನ ತೆರವುಗೊಳಿಸುತ್ತೇವೆ. ಈ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದ್ರೆ, ಸರಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಚಾಮರಸ ಮಾಲಿ ಪಾಟೀಲ್ ಸುದ್ದಿಗೋಷ್ಠಿ

ಕೆಲವು ದಿನಗಳಿಂದ ಕಾರಟಗಿ ಉಪ ವಲಯ ವ್ಯಾಪ್ತಿಯಲ್ಲಿನ ಕಾಲುವೆಯಲ್ಲಿನ ಪೈಪ್​ಲೈನ್​ ತೆಗೆದು ಹಾಕಿದ್ದು, ವಿದ್ಯುತ್ ಕಡಿಗೊಳಿಸಲಾಗಿದೆ. ಆದ್ರೆ ಸರಿಯಾದ ಕಾರ್ಯಾಚರಣೆ ನಡೆಸದಿರುವುದರಿಂದ ಭತ್ತ ನಾಟಿ ಬಳಿಕ ಪುನಃ ನೀರು ಹರಿಸಿಕೊಳ್ಳುವ ಸಾಧ್ಯತೆಗಳಿವೆ ಎಂದರು.

ಕೊಪ್ಪಳ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ವಾಸ್ತವಾಂಶವನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಎರಡ್ಮೂರು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ರೆ ಕಾಡಾ ಮುಖ್ಯ ಇಂಜಿನಿಯರ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಮಿತಿ ಉಪ ಕಾಲುವೆಗೆ ಒಬ್ಬರಿಗೆ ಜವಾಬ್ದಾರಿ ವಹಿಸಿ ಅಕ್ರಮ ಪೈಪ್ ಹಾಗೂ ಪಂಪ್​ಸೆಟ್​ಗಳನ್ನು ಕಿತ್ತು ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇವಲ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಸಾಲದು. ಎಲ್ಲ ಪರಿವರ್ತಕಗಳನ್ನು ಕಿತ್ತು ಹಾಕಬೇಕು ಎಂದರು ಅವರು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.