ರಾಯಚೂರು: ಇನ್ನೋವಾ ಕಾರ್ ಕಳ್ಳತನ ಮಾಡಿದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಸದರ್ ಬಜಾರ್ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ.
ಬೇರೂನ್ ಕಿಲ್ಲಾ ಬಡಾವಣೆಯ ಕಾರ್ ಚಾಲಕ ಮೊಹಮ್ಮದ್ ಅಜರ್ ಬಂಧಿತ ಆರೋಪಿ. ನಗರದ ಹಾಜಿ ಕಾಲೋನಿಯ ನಿವಾಸಿ ಖಾಜಾ ಹುಸೇನ್ ಸೇರಿದ 8 ಲಕ್ಷ ಮೌಲ್ಯದ ಇನ್ನೋವಾ ಕಾರ್ ಕಳೆದ 2021 ಫೆ.8ರಂದು ಕಳ್ಳತನವಾಗಿತ್ತು. ಈ ಬಗ್ಗೆ ಖಾಜಾ ಹುಸೇನ್ ಪೊಲೀಸ್ರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ವಿಶೇಷ ತಂಡ ರಚಿಸುವ ಮೂಲಕ ಕಾರ್ ಕದ್ದ ಖದೀಮನನ್ನ ಬಂಧಿಸಲಾಗಿತ್ತು. ಪೊಲೀಸರು ಬಂಧಿತನಿಂದ 8 ಲಕ್ಷ ಮೌಲ್ಯದ ಕಾರ್ನ್ನು ವಶಕ್ಕೆ ಪಡೆದು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿಶೇಷ ತಂಡದ ಕಾರ್ಯಾಚರಣೆಗೆ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ.