ETV Bharat / state

ಸಂಪುಟ ವಿಸ್ತರಣೆಯಲ್ಲಿ ಬೊಮ್ಮಾಯಿ ಪ್ರಾದೇಶಿಕ ಅಸಮಾನತೆ ತೋರಿದ್ದಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ - cabinet formation,

ಸಚಿವ ಸಂಪುಟ ರಚನೆಯಲ್ಲಿ ರಾಜ್ಯದ ಎಲ್ಲಾ ಭಾಗಕ್ಕೆ ಆದ್ಯತೆ ನೀಡಬೇಕಾಗಿತ್ತು. ಆದ್ರೆ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ 13 ಜಿಲ್ಲೆಗಳ ಭಾಗದ ಶಾಸಕರಿಗೆ ಮಂತ್ರಿ ಸ್ಥಾನ ಒದಗಿಸದೆ, ಸಂಪುಟ ವಿಸ್ತರಣೆಯಲ್ಲಿ ಬೊಮ್ಮಾಯಿ ಪ್ರಾದೇಶಿಕ ಅಸಮಾನತೆ ತೋರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದ್ದಾರೆ.

kpcc
kpcc
author img

By

Published : Aug 9, 2021, 5:17 PM IST

ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರಂಭದಲ್ಲೇ ಎಡವಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಆರೋಪ ಮಾಡಿದ್ದಾರೆ.

ನೂತನವಾಗಿ ಆಯ್ಕೆಯಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಚಿವ ಸಂಪುಟ ರಚನೆ ಮೂಲಕ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಈ ವೇಳೆ ರಾಜ್ಯದ ಎಲ್ಲಾ ಭಾಗಕ್ಕೆ ಆದ್ಯತೆ ನೀಡಬೇಕಾಗಿತ್ತು. ಆದ್ರೆ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ 13 ಜಿಲ್ಲೆಗಳ ಭಾಗದ ಶಾಸಕರಿಗೆ ಮಂತ್ರಿ ಸ್ಥಾನ ಒದಗಿಸದೆ, ಸಂಪುಟ ವಿಸ್ತರಣೆಯಲ್ಲಿ ಬೊಮ್ಮಾಯಿ ಪ್ರಾದೇಶಿಕ ಅಸಮಾನತೆ ತೋರಿದ್ದಾರೆ ಎಂದು ಅವರು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಾಧ್ಯಮಗೋಷ್ಟಿ

ಸಚಿವ ಕೆ.ಎಸ್.ಈಶ್ವರಪ್ಪ, ಆರ್ ಎಸ್ ಎಸ್ ಕಾರ್ಯಕರ್ತರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಧ್ರುವನಾರಾಯಣ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಈಶ್ವರಪ್ಪ ಮೊನ್ನೆ ಪ್ರಮಾಣವಚನ ಸ್ವೀಕರಿಸುವಾಗ ರಾಗ, ದ್ವೇಷ ಬಿಡುತ್ತೇವೆ ಎಂದು ಹೇಳಿದ್ದರು. ಆದ್ರೆ ಬಹಿರಂಗ ಸಮಾವೇಶದಲ್ಲಿ ತಲೆ ತೆಗೀರಿ ಅಂತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈಶ್ವರಪ್ಪ ಅವರನ್ನ ಸಚಿವ ಸಂಪುಟದಿಂದ ಕೈ ಬಿಡಬೇಕು ಮಾಜಿ ಸಂಸದ ಒತ್ತಾಯಿಸಿದ್ರು.

ಇತ್ತೀಚೆಗೆ ನಡೆದ ಮಸ್ಕಿ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನರ ಸ್ವಾಭಿಮಾನಿದ ಫಲವಾಗಿ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಕೋವಿಡ್ ಇರುವ ಕಾರಣದಿಂದ ಚುನಾವಣೆ ಗೆಲುವಿನ ಬಳಿಕ ಕ್ಷೇತ್ರದ ಜನರಿಗೆ ಧನ್ಯವಾದ ಅರ್ಪಿಸಿರಲಿಲ್ಲ. ಇದೀಗ ಮಸ್ಕಿ ಜನರಿಗೆ ಧನ್ಯವಾದ ತಿಳಿಸಲು ಇಂದು ಜಿಲ್ಲೆಗೆ ಆಗಮಿಸಿರುವುದಾಗಿ ತಿಳಿಸಿದರು.

ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೋವಿಡ್ ಮತ್ತು ಉತ್ತಮ ಕಾರ್ಯಕ್ರಮ ನೀಡುವಲ್ಲಿ ಬಿಎಸ್​ವೈ ವಿಫಲವಾಗಿರುವ ಕಾರಣ ಹಾಗೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನೋಡಿ ಹೈಕಮಾಂಡ್ ಬಿಎಸ್​ವೈಯನ್ನು ತೆಗೆದು ಹಾಕಿದ್ದಾರೆ ಎಂದು ಲೇವಡಿ ಮಾಡಿದ್ರು.

ಈ ವೇಳೆ ಶಾಸಕ ಬಸವನಗೌಡ ದದ್ದಲ್, ಬಸವರಾಜ ಪಾಟೀಲ್ ಇಟಗಿ, ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜ್, ಜಿಲ್ಲಾಧ್ಯಕ್ಷ ಬಿ.ವಿ.ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.