ರಾಯಚೂರು: ಲೋಕಸಭೆ ಚುನಾವಣೆ ಹಿನ್ನೆಲೆ ರಾಜಕೀಯ ನಾಯಕರ ನಡುವೆ ವಾಕ್ಸಮರ ಎಲ್ಲೆ ಮೀರುತ್ತಿದೆ. ದೇವದುರ್ಗ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಪ್ರಚಾರ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದಾರೆ.
ರಾಯಚೂರಿನ ಸಿರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಶಿವನಗೌಡ, ಗಂಡನಿಲ್ಲದ ಹೆಣ್ಣು ಮಗಳನ್ನು ಸೋಲಿಸಲು ಕುಮಾರಸ್ವಾಮಿ ಒಂದು ಬೂತಿಗೆ 5 ಲಕ್ಷ ರೂ. ನೀಡಿದ್ದಾರೆ. ಇಂಥವರನ್ನು ರಾಜ್ಯದ ಮುಖ್ಯಮಂತ್ರಿ ಅಂತಾರಾ? _ _ ಅಂತಾರೆ ಎಂದು ಕಿಡಿಕಾರಿದ್ದಾರೆ.
ಅಂಬರೀಶ್ ನನ್ನ ನೆಚ್ಚಿನ ಗುರು. ಸುಮಲತಾ ನನ್ನ ಅಕ್ಕನಂತೆ. ಅವರನ್ನು ಸೋಲಿಸಲು ಮಂಡ್ಯದಲ್ಲಿ 150 ಕೋಟಿ ಖರ್ಚು ಮಾಡುತ್ತಿದ್ದಾರೆ. ಆ ದುಡ್ಡೇನು ಅವರಪ್ಪನ ಮನೆಯದ್ದಾ? ಕುಮಾರಸ್ವಾಮಿ ರಾಜ್ಯವನ್ನು ಲೂಟಿ ಮಾಡಿದ ಹಣವದು. ಪ್ರಾಮಾಣಿಕವಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ. ಅದು ಬಿಟ್ಟು ಹೀಗೆ ಮಾಡುವುದು ಗಂಡುಮಕ್ಕಳ ಕೆಲಸವಲ್ಲ ಎಂದು ಕುಟುಕಿದ್ದಾರೆ. ಈ ವೇಳೆ ಕ್ಷೇತ್ರದ ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.