ETV Bharat / state

ಮತ್ತೆ 'ಕೈ'ಗೆ ಆಪರೇಷನ್ ಭೀತಿ: ಈ ಬಾರಿಯೂ ಇವರೇ ಟಾರ್ಗೆಟ್​ ಅಂತೆ..! - BJP oparation

ಲೋಕ ಕದನದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ರಟ್ಟೆ ತುಂಬಾ ಶಕ್ತಿ ತುಂಬಿಕೊಂಡಿರುವ ಬಿಜೆಪಿ ಮತ್ತೇ ಆಪರೇಷನ್​ಗೆ ​ಇಳಿಯಿತಾ? ಇಂತಹದ್ದೊಂದು ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ನಿಜವಾಗಲೂ ಬಿಜೆಪಿ ನಾಯಕರ ಆಪರೇಷನ್​ ಸಕ್ಸಸ್​ ಆಗುತ್ತಾ?

ಮತ್ತೆ ಸದ್ದು ಮಾಡುತ್ತಿರುವ ಅಪರೇಷನ್ ಕಮಲ
author img

By

Published : May 28, 2019, 8:13 PM IST

ರಾಯಚೂರು: ಜಿಲ್ಲೆಯಲ್ಲಿ ಮತ್ತೆ ಅಪರೇಷನ್ ಕಮಲ ಸದ್ದು ಮಾಡುತ್ತಿದೆ. ಕೈ ಮುಖಂಡರಿಬ್ಬರು ಬಿಜೆಪಿ ಸೇರುತ್ತಾರೆ ಎನ್ನುವ ಗುಸುಗುಸು ಸುದ್ದಿ ಈಗ ಬಹಿರಂಗ ಚರ್ಚೆಗೆ ಗ್ರಾಸವಾಗಿದೆ.

ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಕಾಂಗ್ರೆಸ್​ನ​ ಮೂವರು ಶಾಸಕರಾಗಿ ಆರಿಸಿ ಬಂದರೆ ಬಿಜೆಪಿ ಹಾಗೂ ಜೆಡಿಎಸ್​​ನ ತಲಾ ಇಬ್ಬರು ಶಾಸಕರು ಗೆದ್ದು ಬಂದಿದ್ದಾರೆ. ಇದೀಗ ಕಾಂಗ್ರೆಸ್​ನ ಮೂವರ ಪೈಕಿಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪ್​ಗೌಡ ಪಾಟೀಲ್ ಮತ್ತು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮತ್ತೇ ಬಿಜೆಪಿ ಸೇರುತ್ತಾರೆ ಎನ್ನುವ ಬಿಸಿ ಬಿಸಿ ಚರ್ಚೆಗಳು ಕೇಳಿ ಬರುತ್ತಿವೆ. ಈ ಇಬ್ಬರನ್ನೂ ಸೆಳೆಯಲು ಬಿಜೆಪಿ ಈ ಹಿಂದೆಯೂ ಕಸರತ್ತು ನಡೆಸಿತ್ತು. ಇದೀಗ ಮತ್ತೇ ಅದೇ ಹರಸಾಹಸಕ್ಕೆ ಕೈ ಹಾಕಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಮತ್ತೆ ಸದ್ದು ಮಾಡುತ್ತಿರುವ ಅಪರೇಷನ್ ಕಮಲ

ಮೊದಲು ಇಂತಹದ್ದೊಂದು ಸುದ್ದಿ ಹಬ್ಬುತ್ತಿದ್ದಂತೆ ಲೋಕ ಕದನಕ್ಕೂ ಮುನ್ನ ಶಾಸಕ ಬಸನಗೌಡ ದದ್ದಲ್​ಗೆ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಮತ್ತು ಪ್ರತಾಪ್​​ಗೌಡ ಪಾಟೀಲ್​ಗೆ ಉಗ್ರಾಣ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಮೈತ್ರಿ ಸರ್ಕಾರ ಬಾಯಿ ಮುಚ್ಚಿಸಿತ್ತು. ಆದರೆ, ಲೋಕಸಭೆಯಲ್ಲಿ ಬಿಜೆಪಿ ಭಾರಿ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಮತ್ತೆ ಅಪರೇಷನ್​ಗೆ ಒಳಗಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

BJP is again start operation kamala
ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪ್​ಗೌಡ ಪಾಟೀಲ್

ಈ ಸುದ್ದಿಯನ್ನು ಅಲ್ಲಗಳೆದಿರುವ ಶಾಸಕ ಬಸನಗೌಡ ದದ್ದಲ್, ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ​ಇನ್ನು ಶಾಸಕ ಪ್ರತಾಪ್​​ಗೌಡ ಪಾಟೀಲ್​ ಸಹ ದೂರವಾಣಿ ಮೂಲಕ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನಾನು ಸಹ ಕಾಂಗ್ರೆಸ್​ ಪಕ್ಷದಲ್ಲೇ ಇರುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.

Intro:ಸ್ಲಗ್: ಅಪರೇಷನ್ ಕಮಲ ಭೀತಿ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 28-೦5-2019
ಸ್ಥಳ: ರಾಯಚೂರು
ಆಂಕರ್: ಎಡೆದೂರು ನಾಡು ರಾಯಚೂರು ಜಿಲ್ಲೆಯಲ್ಲಿ ಮತ್ತೆ ಅಪರೇಷನ್ ಕಮಲ ಚರ್ಚೆ ಶುರುವಾಗಿದೆ. ಹಲವು ದಿನಗಳಿಂದ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಾರೆ ಚರ್ಚೆ ನಡೆದು ಬಳಿಕ ಸರಕಾರ ಅ ಇಬ್ಬರು ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗುತ್ತು. ಇದೀಗ ಮತ್ತ ಲೋಕಸಭೆ ಚುನಾವಣೆ ಫಲಿತಾಂಶದ ಜಿಲ್ಲೆಯ ಅಪರೇಷನ್ ಕಮಲ ಚರ್ಚೆ ನಡೆಯುತ್ತಿದೆ. ಈ ಕುರಿತು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ರಾಯಚೂರು ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳು ಇವೆ. ಕಾಂಗ್ರೆಸ್-3, ಬಿಜೆಪಿ-2, ಜೆಡಿಎಸ್-2 ಶಾಸಕರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಮೂವರು ಶಾಸಕರ ಪೈಕಿ ಇಬ್ಬರನ್ನ ಬಿಜೆಪಿಗೆ ಸೆಳೆಯಲು ಬಿಜೆಪಿ ಕಸರತ್ತು ನಡೆಸಿತ್ತು. ಈ ನಿಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆ ಸಹ ನಡೆದವು. ಇದೀಗ ಮತ್ತೆ ಮಸ್ಕಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ಮತ್ತೆ ಬಿಜೆಪಿ ಸೇರ್ಡೆಯಾಗುತ್ತಾರೆ ಎನ್ನುವ ಚರ್ಚೆಗಳು ಜಿಲ್ಲಾ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ವಾಯ್ಸ್ ಓವರ್.2: ಈ ಇಬ್ಬರು ಶಾಸಕರ ಇದಕ್ಕಿಂತಲೂ ಮೊದಲು ಕೇಳಿ ಬಂದಾಗ ಲೋಕಸಭೆ ಚುನಾವಣೆ ಮುನ್ನ ಶಾಸಕ ಬಸವನಗೌಡ ದದ್ದಲ್ ರಿಗೆ ಮಹರ್ಷಿಕ ವಾಲ್ಮೀಕ ನಿಗಮ ಮಂಡಳಿ ಮತ್ತು ಪ್ರತಾಪ್ ಗೌಡ ಪಾಟೀಲ್ ರಿಗೆ ಉಗ್ರಾಣ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಇದಾದ ಬಳಿಕ ತಾಣಗಿದ್ದ ಅಪರೇಷನ್ ಕಮಲದ ಚರ್ಚೆ ಇದೀಗ, ಲೋಕಸಭೆ ಚುನಾವಣೆ ಬಾರಿ ಬಹುಮತ ಸಾಧಿಸಿದ ಹಿನ್ನಲೆಯಿಂದಾಗಿ ಮತ್ತೆ ಅಪರೇಷನ್ ಕಮಲದ ಚರ್ಚೆ ಶುರುವಾಗಿದೆ. ಹೀಗಾಗಿ ಶಾಸಕ ಬಸವನಗೌಡ ದದ್ದಲ್ ಕೈ ಪಕ್ಷವನ್ನ ತೊರೆಯುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತೇವೆ. ಆದ್ರೆ ಇದನ್ನು ಶಾಸಕ ಬಸವನಗೌಡ ದದ್ದಲ್ ತಳ್ಳಿ ಹಾಕಿದ್ರು, ಕಾಂಗ್ರೆಸ್ ಪಕ್ಷವನ್ನ ತೊರೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ರೆ.
ಬೈಟ್.1: ಬಸವನಗೌಡ ದದ್ದಲ್, ಕಾಂಗ್ರೆಸ್ ಶಾಸಕ, ರಾಯಚೂರು ಗ್ರಾಮೀಣ
Conclusion:

ವಾಯ್ಸ್ ಓವರ್.3: ಇನ್ನು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರನ್ನ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಸದ್ಯ ಬಿಜೆಪಿಯಿಂದ ಯಾರು ನನ್ನ ಸಂಪರ್ಕದಲ್ಲಿ ಇಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾನೆ. ಒಂದು ವೇಳೆ ಬಿಜೆಪಿ ಸಂಪರ್ಕಿಸಿದ್ದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸದ್ಯ ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಒಟ್ನಿಲ್ಲಿ, ಬಿಜೆಪಿ ಮುಖಂಡರು ಲೋಕಸಭೆ ಚುನಾವಣೆ ಮುನ್ನ, ಲೋಕಸಭೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಮೈತ್ರಿ ಸರಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದ್ರು. ಈ ಹಿನ್ನಲೆಯಿಂದಾಗಿ ರಾಜ್ಯದಲ್ಲಿ ಅಪರೇಷನ್ ಕಮಲ ಶುರು ಮಾಡಿದ್ರೆ, ಅದರ ಎಫೇಕ್ಟ್ ರಾಯಚೂರು ಜಿಲ್ಲೆಗೆ ತಗಲುವುದೇ ಎನ್ನುವುದು ಸದ್ಯ ಕುತೂಹಲ ಕೆರಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.