ರಾಯಚೂರು : ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಿಸಿಲೂರಿನಲ್ಲಿ ಹಿಂದೆಲ್ಲಾ ಸತತವಾಗಿ ಕೈ ತನ್ನ ಅಧಿಪತ್ಯ ಸಾಧಿಸುತ್ತಾ ಬಂದಿತ್ತು. ಆದ್ರೆ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಅಬ್ಬರಕ್ಕೆ ಬಲಿಯಾದ ಕಾಂಗ್ರೆಸ್ ಪರಾಭವಗೊಂಡಿದೆ. ಜಿಲ್ಲೆಯಲ್ಲಿ ಕಮಲ ಅಭ್ಯರ್ಥಿ ಬಹುಮತಗಳ ಅಂತರದಿಂದ ಭರ್ಜರಿ ಜಯಗಳಿಸುವ ಮೂಲಕ ಪಾರುಪತ್ಯ ಮೆರೆದಿದೆ.
ರಾಯಚೂರು ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕಾಂಗ್ರೆಸ್ ಪ್ರಭಾವ ಹೊಂದಿರುವ ಯಾವುದೇ ಅಭ್ಯರ್ಥಿ ಸ್ಪರ್ಧೆ ಮಾಡಿದ್ರೂ ಸುಲಭವಾಗಿ ಜಯ ಸಾಧಿಸಬಹುದು ಎಂಬ ಮಾತು ಕ್ಷೇತ್ರದಲ್ಲಿದೆ. ಆದ್ರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾವವಿದ್ರೂ ಬಿಜೆಪಿ ಬಹುಮತದಿಂದ ವಿಜಯ ಪಾತಕೆ ಹಾರಿಸಿದೆ.ಈ ಮೂಲಕ ರಾಜಾ ಅಮರೇಶ್ವರ ನಾಯಕ ರಾಯಚೂರು ಲೋಕಸಭೆಯಿಂದ ಸಂಸದನಾಗಿ ಆಯ್ಕೆಯಾದ ಎರಡನೇ ಬಿಜೆಪಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಿತ್ತು. ಈ ಅಲೆಯಲ್ಲಿಯೂ ಆಯ್ಕೆಯಾದ ಕಾಂಗ್ರೆಸ್ ಶಾಸಕರಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಬಿ.ವಿ.ನಾಯಕ ಒಬ್ಬರು. ಈ ಮೂಲಕ ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಯ ಅಲೆ ನಡೆಯುವುದಿಲ್ಲ ಎನ್ನುವ ಸಂದೇಶವನ್ನು ಅಂದು ಮತದಾರರು ಬರೆದಿದ್ದರು. ಆದ್ರೆ ಈ ಬಾರಿ ಚುನಾವಣೆಯಲ್ಲಿ ಮೋದಿ ಅಲೆ ವರ್ಕ್‌ಔಟ್ ಆಗಿದ್ದು, ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದುವರೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕೈ ಪಕ್ಷದ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ರು. 2009ರಲ್ಲಿ ನಡೆದಂಥ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಬಳ್ಳಾರಿ ಸಣ್ಣ ಫಕೀರಪ್ಪ ಬಿಜೆಪಿ ಸಂಸದರಾಗಿ ಆಯ್ಕೆಯಾಗಿ, ಕ್ಷೇತ್ರ ಕಾಂಗ್ರೆಸ್ ಕೈ ತಪ್ಪುವಂತೆ ಮಾಡಿದ್ರು. 2014ರಲ್ಲಿ ನಡೆದ ಲೋಕ ಸಮರದಲ್ಲಿ ಮೋದಿಯ ಅಲೆಯಲ್ಲಿ ಸ್ಪರ್ಧಿಸಿ ಬಿ.ವಿ.ನಾಯಕ 1,499 ಮತ ಅಂತರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಜಯಗಳಿಸುವ ಮೂಲಕ ರಾಯಚೂರು ಜಿಲ್ಲೆ ಮತ್ತೆ ಕೈ ಪಕ್ಷದ ತೆಕ್ಕೆಗೆ ಜಾರಿತ್ತು.
ಆದ್ರೆ ಕಳೆದ ಬಾರಿ ನಡೆಯದ ಮೋದಿ ಅಲೆ ಪ್ರಸಕ್ತ ವರ್ಷದಲ್ಲಿ ಮೋಡಿ ಮಾಡಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆದ್ದು ಬರುವ ಮೂಲಕ ಗೆಲುವು ಸಾಧಿಸಿದ ಎರಡನೇ ಬಿಜೆಪಿ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಡೆದು ಹೊಸ ದಾಖಲೆ ಬರೆದಿದ್ದಾರೆ.