ETV Bharat / state

ರಾಯಚೂರು: ಒಂದೇ ಮತದ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗೆ ರೋಚಕ ಗೆಲುವು! - Siravara town panchayat election

ಪಟ್ಟಣ ಪಂಚಾಯತ್​ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಒಂದು ಮತದ ಅಂತರದಿಂದ ಗೆಲುವು ಸಾಧಿಸಿ ಕಾಂಗ್ರೆಸ್​ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ಒಂದು ಮತದಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ

author img

By

Published : Dec 30, 2021, 4:07 PM IST

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತ್​ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಜಿಲ್ಲೆಯ ಸಿರವಾರ ಪಟ್ಟಣದ 5 ನೇ ವಾರ್ಡ್ ಮಹಿಳಾ ಅಭ್ಯರ್ಥಿ ಲಕ್ಷ್ಮಿ ಆದೆಪ್ಪ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶೈಲಜಾ ಉಮಾಶಂಕರ ಕುಲಕರ್ಣಿ ಒಂದು ಮತದಿಂದ ಸೋಲು ಅನುಭವಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ: ಡಿಕೆಶಿ

ಬಿಜೆಪಿ ಅಭ್ಯರ್ಥಿ ಲಕ್ಷ್ಮಿ ಆದೆಪ್ಪ 249, ಶೈಲಜಾ ಉಮಾಶಂಕರ 248, ಜೆಡಿಎಸ್ ಅಭ್ಯರ್ಥಿ ಲಕ್ಷ್ಮಿ ಉಮಾಪತಿ-12, ಪಕ್ಷೇತರ ಅಭ್ಯರ್ಥಿ ಅಂಜಲಿ ಹನುಮಂತ-5 ಮತ ಪಡೆದುಕೊಂಡಿದ್ದರೆ, ನೋಟಾಕ್ಕೆ3 ಮತಗಳು ಬಿದ್ದಿವೆ.

ವಾರ್ಡ್‌ನಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಸೆಣಸಾಟ ಏರ್ಪಟ್ಟಿತ್ತು. ಮತ ಎಣಿಕೆ ವೇಳೆ ಕ್ಷಣ ಕ್ಷಣಕ್ಕೂ ಬಾರಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಒಂದು ಮತದಿಂದ ಅಚ್ಚರಿಯ ಗೆಲುವು ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.