ರಾಯಚೂರು: ಬೈಕ್-ಬಸ್ ಮಧ್ಯೆ ರಸ್ತೆ ಅಪಘಾತ ಸಂಭವಿಸಿ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂಧನೂರು ನಗರದ ಗಂಗಾವತಿ ರಸ್ತೆಯಲ್ಲಿ ನಡೆದಿದೆ.
ಮಾನ್ವಿ ಮೂಲದ ಹುಲಿಗೆಮ್ಮ(೫೦) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಬೈಕ್ ಚಲಿಸುತ್ತಿದ್ದಾಗ ಬಸ್‌ಗೆ ತಾಗಿದ್ದು, ಈ ವೇಳೆ ಬೈಕ್ ಸ್ಕಿಡ್ ಆಗಿ ಬಿದಿದೆ. ಹಿಂಬದಿಯಲ್ಲಿ ಕುಳಿತ ಮಹಿಳೆ ಬಸ್ ಗಾಲಿಗೆ ಸಿಲುಕಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. ಬೈಕ್ ಚಾಲನೆ ಮಾಡುತ್ತಿದ್ದ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾನ್ವಿಯಿಂದ ಗೋರೆಬಾಳ ಕ್ಯಾಂಪ್‌ಗೆ ತೆರಳುವಾಗ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ಈ ಕುರಿತು ಸಿಂಧನೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.