ETV Bharat / state

ಭೀಮಾ ನದಿ ಪ್ರವಾಹ ಇಳಿಕೆ; ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸಂಚಾರಕ್ಕೆ ಮುಕ್ತ

ರಾಯಚೂರು-ಯಾದಗಿರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಜಲಾವೃತಗೊಂಡಿದ್ದರಿಂದ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಪ್ರವಾಹ ಇಳಿಮುಖವಾದ್ದರಿಂದ ಸಂಚಾರ ಸುಗಮವಾಗಿದೆ.

Bhima River Floods decreased
ಭೀಮಾ ನದಿ ಪ್ರವಾಹ ಕುಸಿತ
author img

By

Published : Oct 19, 2020, 3:46 PM IST

ರಾಯಚೂರು: ಭೀಮಾ ನದಿ ಪ್ರವಾಹ ಕಡಿಮೆಯಾದ್ದರಿಂದ ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ ಸಂಚಾರಕ್ಕೆ ಮುಕ್ತವಾಗಿದೆ.

ಭೀಮಾ ನದಿ ಪ್ರವಾಹ ಕುಸಿತ

ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್​ಗೆ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿ ಬಿಟ್ಟ ಪರಿಣಾಮ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸೇತುವೆ ಮುಳುಗಡೆಯಾಗಿತ್ತು. ಇದೀಗ ನೀರಿನ ಪ್ರಮಾಣ ಇಳಿಮುಖವಾಗಿದ್ದು, ಸೇತುವೆ ಮೇಲೆ ಸಂಚಾರ ಮುಕ್ತಗೊಳಿಸಲಾಗಿದೆ. ರಾಯಚೂರು-ಯಾದಗಿರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಜಲಾವೃತಗೊಂಡಿದ್ದರಿಂದ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಇನ್ನು ಭೀಮಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸರಿಸುಮಾರು 8 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತದೆ ಎಂದು ಜಿಲ್ಲಾಡಳಿತ ಅಗತ್ಯ ಸಿದ್ದತೆಗಳನ್ನ ಕೈಗೊಂಡಿದೆ. ಅಲ್ಲದೇ ಎನ್‌ಡಿ‌ಆರ್‌ಎಫ್ ತಂಡ ಹಾಗೂ ರಕ್ಷಣಾ ಪಡೆ ಜಿಲ್ಲೆಗೆ ಆಗಮಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.