ರಾಯಚೂರು : ಮನೆ ಮುಂದಿನ ರಸ್ತೆ ಬದಿ ಆಟವಾಡುತ್ತಿದ್ದ ವೇಳೆ ಬೊಲೇರೋ ವಾಹನ ಹತ್ತಿದ ಪರಿಣಾಮ ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ಲಿಂಗಖಾನ್ ದೊಡ್ಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ವೀರೇಶ ಎಂಬವರ ಪುತ್ರ ಸಿದ್ದಾರ್ಥ (5) ಮೃತ ಬಾಲಕ. ಬೊಲೇರೋ ರಿವರ್ಸ್ ತೆಗೆಯುವಾಗ ಮಗುವಿನ ಮೇಲೆ ಹತ್ತಿದ್ದು, ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
![Baby dies](https://etvbharatimages.akamaized.net/etvbharat/prod-images/12188807_th.jpg)
ಘಟನೆ ನಡೆಯುತ್ತಿದ್ದಂತೆ ಬೊಲೇರೋ ಚಾಲಕ ರಾಮು ನಾಯಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಇಡಪನೂರು ಪೊಲೀಸರು ಮಗುವಿನ ಸಾವಿಗೆ ಕಾರಣವಾದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಓದಿ : ಹಳೇ ವೈಷಮ್ಯ.. ಬೈಕ್ ಅಡ್ಡಗಟ್ಟಿ ಅಣ್ಣ-ತಂಗಿಯನ್ನು ಥಳಿಸಿದ ಮೂವರ ಬಂಧನ