ETV Bharat / state

ಠಾಣೆಗಳಲ್ಲಿ ಆಯುಧಪೂಜೆ: ಪೊಲೀಸ್ ವಾಹನ- ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಕಮಲ್ ಪಂತ್​​​ - ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಕಮಲ್ ಪಂತ್​​​

ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಇಂದು ಆಯುಧಪೂಜೆ ಹಬ್ಬ ಆಚರಣೆ ಮಾಡಲಾಗಿದ್ದು, ಠಾಣೆಗಳಲ್ಲಿ ರೈಫಲ್, ರಿವಾಲ್ವರ್, ಜೀಪು, ಬೈಕ್​ಗಳಿಗೆ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಪೂಜೆ ಮಾಡಲಾಗಿದೆ.

ayudhapooja festival celebration in police stations
ಪೊಲೀಸ್​ ಠಾಣೆಗಳಲ್ಲಿ ಆಯುಧಪೂಜೆ
author img

By

Published : Oct 14, 2021, 4:08 PM IST

ಬೆಂಗಳೂರು: ದಸರಾ ಹಬ್ಬ ಹಾಗೂ ಆಯುಧ ಪೂಜೆ ಹಿನ್ನೆಲೆ ನಗರದ ಚಾಮರಾಜಪೇಟೆಯ ಸಿಎಆರ್ (ಸಿಟಿ ಆರ್ಮ್ ರಿಸರ್ವ್) ಕಚೇರಿಯಲ್ಲಿ ಆಯುಧ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಭಾಗವಹಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಗರದ ಎಲ್ಲ ಡಿಸಿಪಿಗಳು ಪೂಜೆ ನೆರವೇರಿಸಿದರು.

ಪೊಲೀಸ್​ ಠಾಣೆಗಳಲ್ಲಿ ಆಯುಧಪೂಜೆ

ಸಿಎಆರ್ ಕಚೇರಿಯಲ್ಲಿರುವ ಎಲ್ಲ ಪೊಲೀಸ್ ವಾಹನಗಳಾದ, ಹೊಯ್ಸಳ, ಚೀತಾ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಆಯುಕ್ತ ಕಮಲ್ ಪಂತ್ ದಸರಾ ಹಬ್ಬದ ಪ್ರಯುಕ್ತ ಸಿಎಆರ್ ಕಚೇರಿಯಲ್ಲಿ ದುರ್ಗಾದೇವಿ ಮೂರ್ತಿಯನ್ನು ಕೂಡ ಪ್ರತಿಷ್ಠಾಪನೆ ಮಾಡಿದರು. ದುರ್ಗಾದೇವಿಗೆ ಪೂಜೆ ಮಾಡಿ ನಮನ ಸಲ್ಲಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಲ್ಲಾ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದರು.

ಶಿವಮೊಗ್ಗದಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ:

ಶಿವಮೊಗ್ಗ ಜಿಲ್ಲಾದ್ಯಂತ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ಡಿಎಆರ್ ಆವರಣದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಮಾತ್ರವಲ್ಲದೇ, ದೊಡ್ಡಪೇಟೆ ಪೊಲೀಸ್ ಠಾಣೆ, ಮಹಿಳಾ ಠಾಣೆಯಲ್ಲೂ ಬಂದೂಕುಗಳು ಹಾಗೂ ರಿವಾಲ್ವರ್​ಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆ ಆಚರಿಸಲಾಗಿದೆ.

ಗರಿ ಗರಿ ಬಿಳಿ ಪಂಚೆಯಲ್ಲಿ ಮಿಂಚಿದ ಚಾಮರಾಜನಗರ ಖಾಕಿ ಪಡೆ:

ವರ್ಷಪೂರ್ತಿ ಖಾಕಿ ಧರಿಸಿ ಖದರ್ ತೋರುತ್ತಿದ್ದ ಪೊಲೀಸರು ಆಯಧ ಪೂಜೆ ಪ್ರಯುಕ್ತ ಸಾಂಪ್ರದಾಯಿಕ ದಿರಿಸಾದ ಬಿಳಿ ಪಂಚೆ, ಶರ್ಟ್, ಶಲ್ಯ ಹೊದ್ದು ಜಿಲ್ಲೆಯ ಬಹುತೇಕ ಠಾಣೆಯ ಪೊಲೀಸರು ಸಂಭ್ರಮಿಸಿದರು.ಮಲೆಮಹದೇಶ್ವರ ಬೆಟ್ಟ ಠಾಣೆ, ಚಾಮರಾಜನಗರ ಗ್ರಾಮಾಂತರ ಠಾಣೆ, ತೆರಕಣಾಂಬಿ ಪೊಲೀಸ್ ಠಾಣೆ ಸಿಬ್ಬಂದಿ ಪಂಚೆ-ಶಲ್ಯ, ಮಹಿಳಾ ಕಾನ್ಸ್‌ಟೇಬಲ್​​ಗಳು ಸೀರೆಯುಟ್ಟು ಆಯುಧ ಪೂಜೆ ನೆರವೇರಿಸಿದರು.

ayudhapooja festival celebration in police stations
ಬಿಳಿ ಪಂಚೆಯಲ್ಲಿ ಮಿಂಚಿದ ಚಾಮರಾಜನಗರ ಪೊಲೀಸರು

ಆಯುಧ ಪೂಜೆ ಹಿನ್ನೆಲೆ ಪಿಸ್ತೂಲ್, ತುಫಾಕಿಗೆ ಪೂಜೆ:

ರಾಯಚೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಣಿದು ಕುಪ್ಪಳಿಸುವ ಮೂಲಕ ಆಚರಿಸಿದರು. ಆಯುಧ ಪೂಜೆ ಹಿನ್ನೆಲೆ ಪಿಸ್ತೂಲ್, ತುಫಾಕಿ, ಎ.ಕೆ.47, ಗನ್, ಸೋಲ್ಡ್, ಪೋಲೀಸ್‌ ವ್ಯಾನ್‌ಗಳು, ಜೀಪ್‌ಗಳು, ಕಾರ್‌ಗಳು ಸೇರಿದಂತೆ ಆಯುಧ, ವಸ್ತುಗಳಿಗೆ ಪೂಜೆ ಸಲ್ಲಿಸಲಾಯಿತು.

ಎಸ್​​ಪಿ ಪ್ರಕಾಶ್ ನಿಕ್ಕಂ ಹಾಗೂ ಪತ್ನಿ ಸಮೇತ ಪೂಜೆ ಸಲ್ಲಿಸಿದರು. ಪೂಜೆ ವೇಳೆ ಆಯೋಜಿಸಿದ ಬ್ಯಾಂಡ್​​ ವಾದನಕ್ಕೆ ಎಸ್​ಪಿ, ಡಿವೈಎಸ್ಪಿ, ಪಿಎಸ್‌ಐ ಹಾಗೂ ಸಿಬ್ಬಂದಿ ವರ್ಗ ಕುಳಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದ್ರು.

ಕುಣಿದು ಕುಪ್ಪಳಿಸಿದ ಖಾಕಿ ಪಡೆ

ದೇವಾಲಯಗಳಲ್ಲಿ ವಾಹನಗಳ ಪೂಜೆ:

ನವರಾತ್ರಿ ಎಂದರೆ ಶಾಸ್ತ್ರಪೂಜೆಯೂ ಹೌದು ಶಸ್ತ್ರಪೂಜೆಯೂ ಹೌದು. ನವರಾತ್ರಿಯ ಒಂಬತ್ತನೆಯ ದಿನ ಆಯುಧಗಳಿಗೆ ಪೂಜೆ ನೆರವೇರಿಸುವ ಕಲ್ಪನೆಯಿದೆ. ಇಂದು ವಾಹನಗಳಿಗೆ ಪೂಜೆ ಸಲ್ಲಿಸುವ ಪ್ರತೀತಿಯೂ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ದೇವಾಲಯಗಳಲ್ಲಿ ಸಂಭ್ರಮದಿಂದ ವಾಹನ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ಮಂಗಳೂರಿನ ಎಲ್ಲಾ ದೇವಾಲಯಗಳಲ್ಲೂ ದ್ವಿಚಕ್ರ, ತ್ರಿಚಕ್ರ, ಚತುಶ್ಚಕ್ರ ವಾಹನಗಳಿಗೆ ಪೂಜೆ ನೆರವೇರಿತು. ಮಂಗಳೂರಿನ ಮಂಗಳಾದೇವಿ, ಶರವು ಶ್ರೀಮಹಾಗಣಪತಿ, ಉರ್ವ ಮಾರಿಗುಡಿ, ಕದ್ರಿ ಶ್ರೀ ಮಂಜುನಾಥ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಪೊಳಲಿ‌ಶ್ರೀ ರಾಜರಾಜೇಶ್ವರಿ ದೇವಾಲಯಗಳಲ್ಲಿ ಸಾವಿರಾರು ವಾಹನಗಳಿಗೆ ಪೂಜೆ ನೆರವೇರಿತು.

ವಾಹನಗಳಿಗೆ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.