ETV Bharat / state

ಕಾರ್ಮಿಕ ದಿನಾಚರಣೆ.. ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಲ್ಲಿ ಕೋವಿಡ್-19 ಬಗ್ಗೆ ಜಾಗೃತಿ.. - Labour Day

ಕೆಲಸ ಮಾಡುವವರಲ್ಲಿ ಅಥವಾ ಸುತ್ತಮುತ್ತಲಿನ ಜನರಲ್ಲಿ ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಂಡಲ್ಲಿ ತಕ್ಷಣ ಮಾಹಿತಿ ನೀಡಿ. ಹೊರ ಜಿಲ್ಲೆ, ರಾಜ್ಯದಿಂದ ಬಂದವರ ಬಗ್ಗೆ ಎಚ್ಚರವಹಿಸಬೇಕು ಎಂದು ತಾಪಂ ಇಒ ಪಂಪಾಪತಿ ಹಿರೇಮಠ ತಿಳಿ ಹೇಳಿದರು.

Labour Day
ಕಾರ್ಮಿಕ ದಿನಾಚರಣೆ
author img

By

Published : May 2, 2020, 11:38 AM IST

ಲಿಂಗಸುಗೂರು: ತಾಲೂಕಿನ ನೀರಲಕೇರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚಿತ್ರನಾಳ ಗ್ರಾಮದಲ್ಲಿ ಕಾರ್ಮಿಕ ದಿನಾಚರಣೆಯನ್ನು ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರ ಜೊತೆ ಆಚರಿಸಲಾಯಿತು.

ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಲ್ಲಿ ಕೋವಿಡ್-19 ಬಗ್ಗೆ ಜಾಗೃತಿ..

ಶುಕ್ರವಾರ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ಮತ್ತು ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19 ಕುರಿತು ಪ್ರತಿಜ್ಞಾ ವಿಧಿ ಬೋಧಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮನವರಿಕೆ ಮಾಡಿ ಕೊಡಲಾಯಿತು. ಕೆಲಸ ಮಾಡುವವರಲ್ಲಿ ಅಥವಾ ಸುತ್ತಮುತ್ತಲಿನ ಜನರಲ್ಲಿ ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಂಡಲ್ಲಿ ತಕ್ಷಣ ಮಾಹಿತಿ ನೀಡಿ. ಹೊರ ಜಿಲ್ಲೆ, ರಾಜ್ಯದಿಂದ ಬಂದವರ ಬಗ್ಗೆ ಎಚ್ಚರವಹಿಸಬೇಕು ಎಂದು ತಾಪಂ ಇಒ ಪಂಪಾಪತಿ ಹಿರೇಮಠ ತಿಳಿ ಹೇಳಿದರು.

ನಂತರದಲ್ಲಿ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕಾರ್ಮಿಕರಿಗೆ ಸಿಹಿ ಹಂಚಲಾಯಿತು. ಕೊನೆಯಲ್ಲಿ ಪಿಡಿಒ ಶಶಿಕಲಾ ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.